Thursday 26 September 2019

“ನನ್ನ ಮಗಳ ಮದುವೆ ಯಾವಾಗ ಆಗುತ್ತದೆ…?”

     ಕಳದ ಶನಿವಾರ ಬೆಂಗಳೂರಿನಿಂದ ಒಬ್ಬ ತಾಯಿ ತನ್ನ ಮಗಳ ಮದುವೆಗಾಗಿ ಜಾತಕವನ್ನು ತೋರಿಸುವುದಕ್ಕೆ ಬಂದಿದ್ದರು.


ತಾಯಿ: “ನನ್ನ ಮಗಳು ಭಾರತದಲ್ಲಿ BE ಮಾಡಿ, ಅಮೇರಿಕದಲ್ಲಿ MS ಮಾಡಿ ಕಳದ ಎಂಟು ವರ್ಷಗಳಿಂದ ಅಮೆರಿಕದಲ್ಲೇ ಉದ್ಯೋಗವನ್ನು ಮಾಡುತ್ತಿದ್ದಾಳೆ. ಕಳದ ಐದು ವರ್ಷಗಳಿಂದ ನನ್ನಮಗಳಿಗಾಗಿ ಮದುವೆಯ ಸಂಭಂದಗಳನ್ನು ನೋಡುತ್ತಿದ್ದೇವೆ. ಆದರೇ ಯಾವ ಸಂಭಂದವೂ ಮುಂದುವರೆಯುತ್ತಿಲ್ಲ”. ಅಂತ ತನ್ನ ಪ್ರಶ್ನೆಯನ್ನು ಪರಿಚಯಮಾಡಿಕೊಂಡರು. ತನ್ನ ಮಗಳ ಜಾತಕವನ್ನು ಕೊಟ್ಟರು.


     ನಾನು ಅವರ ಕೊಟ್ಟ ಜಾತಕವನ್ನು ನೋಡಲಾರಂಬಿಸಿದೆ. ವಿವಾಹ ವಿಷಯದಲ್ಲಿ ಜಾತಕದಲ್ಲಿರುವ ಗ್ರಹಸ್ಥಿತಿ ಚೆನ್ನಾಗಿದೆ. ನಡೆಯುತ್ತಿರುವ ದಶೆ, ಗೋಚಾರ ಮತ್ತು ಗುರುಭಲ ಎಲ್ಲವೂ ಅನುಕೂಲವಾಗಿದೆ. ಅವರು ಕೇಳುವ ಪ್ರಶ್ನೆಗು ಜಾತಕ ಫಲಕ್ಕು ಹೊಂದಾಣೀಕೆ ಆಗುತ್ತಿಲ್ಲ ಅಂತ ತಿಳಿದು ಮತ್ತಿಷ್ಟು ಆಳವಾಗಿ ಜಾತಕವನ್ನು ನೋಡಲಾರಂಬಿಸಿದೆ. ಅಷ್ಟಕವರ್ಗ, ಗುರುಭಲ “ವೇದ” ಗೆ ಒಳಗಾಗಿದೆಯಾ, ಗುರು ಮತ್ತು ಶನಿ ಯಿರುವ ಕಕ್ಷ್ಣೆ ಏನಾಗಿದೆ…. ಮೊದಲಾದ ಹೆಚ್ಚಿನ ಪರಿಶೀಲನೆಯನ್ನು ಮಾಡಿದೆ. ಕೊನೆಗೂ ವಿವಾಹವು ಆಗದೇ ಇರುವುದಕ್ಕೆ ಸರಿಯಾದ ಕಾರಣೆ ಕಾಣಿಸಲಿಲ್ಲ.


ನಾನು: “ನಿಮ್ಮ ಮಗಳ ಜಾತಕವು ಚೆನ್ನಾಗಿದೆ. ವಿವಾಹವನ್ನು ತಡಮಾಡುವ ಯಾವ ದೋಷವು ಕಾಣಿಸುತ್ತಿಲ್ಲ. ಈಗ ಗುರುಭಲ ಯಿದೆ, ನಡೆಯುತ್ತಿರುವ ದಶೆ ಸಹಿತ ಚೆನ್ನಾಗಿದೆ”. ನಿಮ್ಮ ಮಗಳಿಗೆ ಖಂಡಿತವಾಗಿಯೂ ಮದುವೆಯು ಆಗುತ್ತದೆ. ಚಿಂತಿಸಬೇಡಿ” ಅಂತ ತಿಳಿಸಿದೆ.


ತಾಯಿ:“ಆಚಾರ್ಯರೇ! ಕಳದ ಐದು ವರ್ಷಗಳಿಂದಲೂ ಇದನ್ನೇ ಕೇಳುತ್ತಿದ್ದೇನೆ. ಎಲ್ಲ ಜ್ಯೋತಿಷರು ಇದೇತರ ಹೇಳುತ್ತಿದ್ದಾರೆ. ಗುರುಭಲ ಯಿದೆ ಆಗುತ್ತದೆ ಯೆನ್ನುತ್ತಾರೆ. ಕೆಲವಿನ ಸಮಯದಲ್ಲಿ ಗುರುಭಲ ಯಿಲ್ಲ, ಶಾಂತಿಯನ್ನು ಮಾಡಿಸಿ ಮತ್ತು ಸ್ವಯಂವರ ಪಾರ್ವತಿ ಹೋಮವನ್ನು ಮಾಡಿಸಿ” ಅಂತ ತಿಳಿಸುತಿದ್ದಾರೆ. ನಾವು ಎಲ್ಲ ಜ್ಯೋತಿಷರು ಹೇಳಿದ್ದನ್ನು ಮಾಡಿಸಿದ್ದೀವಿ. ಕೊಕ್ಕೆ ಸುಭ್ರಮಣ್ಯ, ಮಂತ್ರಾಲಯ, ತಿರುಪತಿ ಮತ್ತು ಶ್ರೀಕಾಳಹಸ್ತಿ” ಮೊದಲಾದ ಕ್ಷೇತ್ರದರ್ಶನಮಾಡಿದ್ದೀವಿ. ಜ್ಯೋತಿಷರು ತಿಳಿಸಿದ ಸ್ವಯಂವರ ಪಾರ್ವತೀ ಮಂತ್ರ ಜಪ-ಹೋಮಗಳೆಲ್ಲವನ್ನೂ ಮಾಡಿಸಿದ್ದೀವಿ”. ನಮ್ಮ ಮನೆಯಲ್ಲಿ ರುಕ್ಮಿಣೀ ಕಳ್ಯಾಣ ಮಾಡಿಸಿದ್ದೀವಿ. ಹೆಚ್ಚಿನ ಧಾನ ಧರ್ಮಗಳನ್ನು ಮಾಡುತ್ತಿದ್ದೀವಿ. ಕಳದ ಐದು ವರ್ಷಗಳಿಂದ ಸತತವಾಗಿ ವಿವಾಹ ಪ್ರಯತ್ನವನ್ನು ಮಾಡಿದರೂ ಕೂಡಿಬರುತ್ತಿಲ್ಲ. ನಮ್ಮ ಮಗಳ ಜಾತಕದಲ್ಲಿ ಕಳ್ಯಾಣಯೋಗ ಇದೆಯಾ? ಇದ್ದರೇ ಯೇಕೆ ವಿವಾಹವಾಗುತ್ತಿಲ್ಲ?” ಅಂತ ಆ ತಾಯಿ ಪ್ರಶ್ನೆಮಾಡಿದರು


     ಕೆಲವೊಮ್ಮೆ ಜಾತಕ, ವಿವಾಹ ಭಲ ಕೂಡಿಬಂದರೂ ತಾವೇ ಬೇಡಯೆನ್ನುವ ಸಂಧರ್ಭವೂ ಇದೆ. ಅದೇನೆಂದರೆ ವಿವಾಹಸಮಯದಲ್ಲಿ ಅವರಿಗೆ ತಕ್ಕಂತೆ ಸಂಭಂದ ಬಂದಿಲ್ಲವೆಂದು ಉತ್ಸಾಹತೋರಿಸದೇ ಇರುವುದೂ ಇದೆ. ಬಹಳಾ ಸೋಚನೀಯವಾದ ವಿಚಾರ. ಇತ್ಯೀಚ್ಚಿಗೆ ಇದು ಬಹಳಾ ಹೆಚ್ಚಾಗುತ್ತಿದೆ. ಪ್ರಾಚೀನ ಕಾಲದಲ್ಲಿ(50 ವರ್ಷಕ್ಕೂ ಹಿಂದೆ) ಹುಡ್ಗಿ ಮತ್ತು ಹುಡ್ಗನ ಕಡೆ ತಾಯಿತಂದೆ ವಿವಾಹಸಮ್ಮತವನ್ನು ಮಾಡಿ ಜ್ಯೋತಿಷನ ಹತ್ತರ ಹೋಗಿ ಕೇಳುತ್ತಿದ್ದರು. ವಿವಾಹ ಹೊಂದಾಣಿಕೆ ಆಗುತ್ತಿದೆ ಅಂತ ಜ್ಯೋತಿಷ ಹೇಳಿದರೇ ವಿವಾಹಕ್ಕೆ ಯಾವ ಭಂದಕವು ಇರುತಿದ್ದಿಲ್ಲ. ಹೊಂದಾಣಿಕೆ ಆಗಲಿಲ್ಲದ ಪಕ್ಷದಲ್ಲಿ ಮುಂದುವರಿಯುತಿದ್ದಿಲ್ಲ.




     ಹೊಂದಾಣಿಕೆ ನೋಡುವ ಉದ್ದೇಶವೇನೆಂದರೇ “ಭಗವಂತ ಈ ವಿವಾಹವನ್ನು ಅಂಗೀಕರಿಸುತಿದ್ದಾನೆ” ಯೆನ್ನುವ ನಂಬಿಕೆ. ಇದು ಶಾಸ್ತ್ರದ ಮುಖಾಂತರವಾಗಿ ಆಗುವುದು. ಈ ಅತ್ಯಾಧುನಿಕೆ ಕಾಲದಲ್ಲಿ ಈ ಪದ್ದತಿಯು ಯಿಲ್ಲವಾಗಿದೆ. ವಿವಾಹ ಪರಿಚಯವೇದಿಕೆ ಅಥವ ಮಠಗಳಿಗೆ ಹೋಗಿ ವಿವಾಹಕ್ಕಾಗಿ ನೊಂದಣೆಮಾಡಿದ ಪುಸ್ತಕಗಳನ್ನು ನೋಡಿ, ತಾವು ಬಯಸಿದ ಸಂಭಂದಗಳನ್ನು ತೆಗದುಕೊಂಡು ಜ್ಯೋತಿಷರಬಳಿಹೋಗುತ್ತಾರೆ. ಜ್ಯೋತಿಷನು ವಿವಾಹಕ್ಕೆ ಹೊಂದಾಣಿಕೆ ಆಗಿದೆ ಅಂತ ಒಪ್ಪಿಗೆ ಕೊಟ್ಟನಂತರ ಹುಡ್ಗ ಮತ್ತು ಹುಡ್ಗಿ ಆಯ್ಕೆ ಪ್ರಾರಂಭವಾಗುತ್ತದೆ. ಒಂದುವೇಳೆ ಜಾತಕ ಸಮ್ಮತವಾಗಿದ್ದರೂ ಹುಡ್ಗ-ಹುಡ್ಗಿ ಗೆ ಸಮ್ಮತವಾಗಲಿಲ್ಲದ ಪಕ್ಷದಲ್ಲಿ ಸಂಭಂದ ಮುಂದುವರೆಯುವುದಿಲ್ಲ. ಹೀಗಾಗಿ ಜಾತಕ ಚೆನ್ನಾಗಿದ್ದು, ಗ್ರಹಭಲ ಕೂಡಿಬಂದರೂ ವಿವಾಹಗಳು ಆಗುತ್ತಿಲ್ಲ. ಭಗವಂತ ಶಾಸ್ತ್ರದ ಮೂಲಕ ಸಮ್ಮತವನ್ನು ಕೊಟ್ಟರೂ ಇವರಿಗೆ ಬೇಕಾದ ರೀತಿಯಲ್ಲಿ ಹುಡ್ಗ ಅತವ ಹುಡ್ಗಿ ಇರುವುದಿಲ್ಲ ಕಾರಣ ಮದುವೆಯ ಪ್ರಯತ್ನ ಮುಂದುವರೆಯುವುದಿಲ್ಲ.


ನಾನು ಕೇಳಿದೆ:  “ನೀವು ಎಂತಹ ಹುಡ್ಗನನ್ನು ನೋಡುತ್ತಿದ್ದೀರಿ?”


ತಾಯಿ: “ನಮಗೆ ಪ್ರತ್ಯೇಕವಾದ Requirements ಏನು ಇಲ್ಲ. ಆದರೇ ನಮ್ಮ ಹುಡ್ಗಿ ಇಷ್ಟಪಡಲು ಕೆಲವಿನ ವಿಚಾರವನ್ನು ಮುಂದುವರಿಸುತ್ತಿದ್ದೇವೆ”

  1. ನನ್ನ ಮಗಳು ಅಮೆರಿಕಾದಲ್ಲಿ ಗೂಗುಲ್ ಕಂಪೆನಿಯಲ್ಲಿ ಉದ್ಯೋಗಮಾಡುತ್ತಿದ್ದಾಳೆ. ಹಾಗಾಗಿ ಹುಡ್ಗನೂ ಸಹ ಮೈಕ್ರೋಸಾಫ್ಟ್, ಇನ್ಫೋಸಿಸ್, ಫೇಸ್ಬುಕ್, ಪೇಪಾಲ್ ಅಥವ ಗೂಗುಲ್.. ಮೊದಲಾದಂತಹ ದೊಡ್ಡ ಕಂಪೆನಿಗಲಲ್ಲಿ ಉದ್ಯೋಗ ಮಾಡುತ್ತಿರಬೇಕು ಮತ್ತು ಅಮೆರಿಕಾದಲ್ಲೇ ಇರಬೇಕು.
  2. ಹುಡ್ಗನ ತಂದೆತಾಯಿ ಭಾರತದಲ್ಲೇ ಇರಬೇಕು. ಅವರು ವೊಳ್ಲೆಯ ಸ್ಥಿತಿಯಲ್ಲಿರಬೇಕು. ಭಾರತದಲ್ಲಿ ಸ್ವಂತವಾದಂತಹ ಮನೆ ಯಿರಬೇಕು.
  3. ಸಂಬಳ (Salary) ತಿಂಗಳಿಗೆ 150K-200K ಇರಬೇಕು  (in Indian currency) .
  4. ನೋಡುವುದಕ್ಕೆ ಚೆನ್ನಾಗಿರಬೇಕು(Handsome). ನನ್ನ ಮಗಳು ಎತ್ತರ 4.8″ ಇದ್ದಳೆ. ನನ್ನಮಗಳಿಗೆ 5 ರಿಂದ 6″ ಎತ್ತರದ ಹುಡ ಬೇಕು.
  5. ನಮ್ಮ ಶಾಖೆಯೇ ಆಗಿರಬೇಕು. ಬೇರೇ ಶಾಖೆ ಬೇಡ. 
  6. ನನ್ನ ಜೀವನದಲ್ಲಿ(ತಾಯಿ) ಹೆಣ್ಣುಮಕ್ಕಳ ಕಾಟ ಬಹಳ ಅನುಭವಿಸಿದ್ದೀನಿ. ನನ್ನ ಮಗಳಿಗೆ ಆತರ ತೊಂದರೆಗಳು ಇರಬಾರದು. ಹೆಣ್ಣುಮಕ್ಕಳಿಲ್ಲದ ಮನೆ ಆಗಿರಬೇಕು.
  7. ಹುಡ್ಗನ ತಂದೆತಾಯಿಗಳು ಭಾರತದಲ್ಲೇ ಇರಬೇಕು. ವರ್ಷಕ್ಕೆ ಒಮ್ಮೆ ಬಂದು ಮನೆಯಲ್ಲಿ ತಿಷ್ಟೆ ಹಾಕಬಾರದು.
  8. ಮಗನಿಂದ ಹಣವನ್ನು ಬಯಸಬಾರದು. ನಾವು ಹಣವನ್ನು ಹೇಗೆ ಖರ್ಚುಮಾಡುವುದರಬಗ್ಗೆ ಹೆಚ್ಚಿನ ಯೋಚನೆಮಾಡಬಾರದು.
  9. ಹುಡ್ಗನಿಗೆ ಸಿಗಿರೇಟ್ ಹವ್ಯಾಸ ಇರಬಾರದು. ನನ್ನ ಮಗಳಿಗೆ ಸಿಗಿರೇಟ್ ವಾಸನಿ ಆಗುವುದಿಲ್ಲ. ಸೋಷಲ್ ಡ್ರಿಂಕಿಂಗ್ ಕೂಡಾ ನನ್ನ ಮಗಳಿಗೆ ಇಷ್ಟ ಆಗೋಲ್ಲ.
  10. ಹುಡ್ಗನಿಗೆ ಹೆಚ್ಚು ಸ್ನೆಹಿತರು ಇರಬಾರದು. ವೀಕೆಂಡ್ ಪಾರ್ಟೀ ಗಳಿಗೆ ಹೋಗಬಾರದು. ಎಲ್ಲಿಗೆ ಹೋದರೂ ನನ್ನ ಮಗಳನ್ನು ಕರ್ಕೊಂಡು ಹೋಗಬೇಕು.

ನಾನು: “ಇಷ್ಟು Requirements ಇರುವ ಹುಡ್ಗ ಸಿಗಬೇಕಾದರೇ ಬಹು ಪ್ರಯತ್ನಮಾಡಬೇಕು. ಆದರೂ ಸಿಗುತ್ತಾನೆ ಅಂತ ಬರೋಸೆ ಇಲ್ಲ. ಹೆಚ್ಚಿನ ಕಾಲ ಕಾಯಬೇಕಾಗುತ್ತದೆ”.


ತಾಯಿ: ಮೇಲೆ ತಿಳಿಸಿದ Requirements ಇರುವವರನ್ನೇ ನೋಡುತ್ತಿದ್ದೀವಿ ಆಚಾರ್ಯರೆ. ನಾವೇನು ಬೇರೆ ಜನರತರ ಹೆಚ್ಚು ಬಯಸುತ್ತಿಲ್ಲ. ನನ್ನ ಮಗಳ ವಿವಾಹ ಶೀಘ್ರದಲ್ಲಿ ಆಗುವುದಕ್ಕೆ ಯಾವುದಾದರೂ ಹೋಮ, ಪೂಜೆ ಮತ್ತು ಪಠಿಸಬೇಕಾದ ಮಂತ್ರವನ್ನು ತಿಳಿಸಿ ಆಚಾರ್ಯರೆ.


ನಾನು: ” ನಿಮ್ಮ ಮಗಳ ಶೀಘ್ರವಿವಾಹಕ್ಕಾಗಿ ಭಗವಂತನನ್ನು ನಿತ್ಯ ಪ್ರಾರ್ಥನೆಮಾಡಿ.ನಿಮ್ಮ ಮಗಳನ್ನು ನಿತ್ಯ ಸ್ವಯಂವರ ಪಾರ್ವತಿ ಮಂತ್ರವನ್ನು ಪಾರಾಯಣ ಮಾಡುವುದಕ್ಕೆ ತಿಳಿಸಿ.  ನಿಮ್ಮ ಮಗಳನ್ನು ಗುರುವಾರ  ಗುರುಗಳ ಗುಡಿ/ಮಠಕ್ಕೆ ಹೋಗಿ ಮನಃಪೂರ್ವಕವಾಗಿ ಪ್ರಾರ್ಥನೆಮಾಡಿ ತುಪ್ಪದಿಂದ ದೀಪ ಹಚ್ಚುವುದಕ್ಕೆ ತಿಳಿಸಿ. ಗುರುಗಳ ಕರುಣೆಯಿದ್ದಲ್ಲಿ ನಿಮ್ಮ ಮಗಳ ಭಕ್ತಿಗೆ ಮೆಚ್ಚಿ ಅನುಗ್ರಹಿಸಬಹುದು”.


ತಾಯಿ: ನನ್ನಮಗಳಿಗೆ ಗುಡಿ/ಮಠ/ಮಂತ್ರ ಪಾರಾಯಣದ ಮೇಲೆ Interest ಇಲ್ಲ. ಅವಳಿಗೆ ಮಾಡುವುದಕ್ಕೆ ಪುರುಸೊತ್ತು ಕೂಡಾ ಇರುವುದಿಲ್ಲ. ಅವಳಪರವಾಗಿ ನಾನು ಮಾಡಬಹುದೇ?. ಅವಳಿಗಾಗಿ ನಾನು ನಿತ್ಯ ರುಕ್ಮಿಣೀ ಕಳ್ಯಾಣ ವೋದುತ್ತಿದ್ದೀನಿ. ಅವಳಿಗಾಗಿ ಎಲ್ಲ ತೀರ್ಥ ಕ್ಷೇತ್ರಗಳನ್ನು ದರ್ಶನಮಾಡುತ್ತಿದ್ದೇನೆ” ಆದರೂ ಯಾಕೋ ಭಗವಂತ ಮನಸುಮಾಡುತ್ತಿಲ್ಲ.”


     ಮೇಲಿನ ವಿಚಾರ ಆಲೋಚನೆಮಾಡಿದರೆ ವಿವಾಹಕ್ಕಾಗಿ ಮತ್ತು ಮಗಳ ಪರವಾಗಿ ಇವರು ಪೂಜೆ/ಪಾರಾಯಣ/ಕ್ಷೇತ್ರದರ್ಶನ ಮಾಡಿದರೇ ಏನು ಫಲ..! ಹೊಟ್ಟೆನೋವಿದ್ದವರೂ ಮಾತ್ರವೇ ಗುಳಿಗೆ ನುಂಗಬೇಕಲ್ವೇ! ಮಂತ್ರದ ಅರ್ಥ ಗೊತ್ತಿಲ್ಲದೇ ಜಪ/ಪಾರಾಯಣ ಮಾಡುತ್ತಿದ್ದಾರೆ. ಸ್ಥಳ ಮಹಿಮಿಗೊತ್ತಿಲ್ಲದೇ ತೀರ್ಥಕ್ಷೇತ್ರದ ದರ್ಶನಮಾಡುತ್ತಿದ್ದಾರೆ. ಎಷ್ಟು ಮಾಡಿದರೂ ತಾವು ಬಯಸಿದ ಹುಡ್ಗನು ಸಿಗುವುದಕ್ಕೆ ಅವಕಾಶಗಳೇ ಕಡಿಮೆ ಯಿದೆ. ಏಕೆಂದರೇ ಇವರು ಬಯಸುವ ಎಲ್ಲ ಲಕ್ಷಣಗಳು ಒಬ್ಬ ಹುಡ್ಗನಲ್ಲಿ ಹೊಂದಿರುವುದು ಹೇಗೆ ಸಾಧ್ಯ. ವಿವಾಹವು ತಡವಾಗುವುದಕ್ಕೆ ಇವರ ಬಯಕೆಗಳೇ ಕಾರಣ. ಜಾತಕ ಮತ್ತು ಭಗವಂತ ಕಾರಣವೇ ಅಲ್ಲ”. ವಿವಾಹ ತಡವಾಗುವುದಕ್ಕೆ ಕೆಲವೊಮ್ಮೆ ಪ್ರಾಚೀನ ಕರ್ಮ ಕಾರಣವಾಗುತ್ತದೆ. ಇದನ್ನು ಜಾತಕದಲ್ಲಿ ಗುರ್ತಿಸಬಹುದು. ಕೆಲವೊಮ್ಮೆ ವಿವಾಹ ಸ್ವಯಂಕೃತಾಪರಾದದಿಂದ ತಡವಾಗುತ್ತದೆ. ಇದನ್ನು ಜಾತಕಮುಕಾಂತರ ತಿಳಿಯುವುದು ಕಷ್ಟ. ಅವರ ಮನಸ್ಸು ಮತ್ತೆ ಬಯಸುವ ವಿಚಾರವನ್ನು ಪರಿಶೀಲನೆಮಾಡಬೇಕಾಗುತ್ತದೆ.

    
     ಮೇಲಿನತರಹದ ವಿವಾಹಪ್ರಶ್ನೆಯನ್ನು ನೋಡುವುದು ನನಗಿದೇನು ಮೊದಲಬಾರಿ ಅಲ್ಲ. ಇವತ್ತಿನ ದಿನಗಳಲ್ಲಿ ಬಹಳಷ್ಟು ಜನರು ಬಯಸುವುದು/ಕೇಳುವುದು ಇದೇತರ ಇದೆ. ಇದೇತರ ಮುಂದುವರಿತಾಹೋದರೆ ವಿವಾಹವು ಆಗುವುದು ಆಲಸ್ಯವಾಗುತ್ತದೆ. ವಯಸ್ಸು ಮೀರುತ್ತಿದ್ದಷ್ಟು ಅವರು ಬಯಸುವ ಲಕ್ಷಣಗಳನ್ನೂ ಸಹಾ ಒಂದೊಂದನ್ನು ಬಿಡಬೇಕಾಗುತ್ತದೆ. ಎಲ್ಲೋ ಒಂದು ಕಡೆ ಹುಡ್ಗ/ಹುಡ್ಗಿ ಆಯ್ಕೆ ವಿಷಯದಲ್ಲಿ ರಾಜಿ ಆಗಬೇಕಾಗುತ್ತದೆ. ಇಲ್ಲದ ಪಕ್ಷದಲ್ಲಿ ಕೊನೆಗೆ ಬಯಸುವುದು ಒಂದೇ ಉಳಿಯುತ್ತದೆ. ಅದೇನಂದರೇ “ನನ್ನ ಮಗಳಿಗೆ ಯಾವುದಾದರೂ ಗಂಡು/ಹೆಣ್ಣು ಸಿಕ್ಕರೇ ಸಾಕು” ಅಂತ. ಆ ಸಮಯದಲ್ಲಿ ವಯಸ್ಸು ಬಹಳಾ ಆಗಿ ಹೋಗಿರುತ್ತದೆ. ವೈವಾಹಿಕ ಜೀವನದಮೇಲೆ, ಭಂದುಬಳಗದಮೇಲೆ  ಮತ್ತು ಭಗವಂತನಮೇಲೆ ಉತ್ಸಾಹವೂ ಕಳದುಕೊಂಡಿರುತ್ತಾರೆ.


ಸಂತೋಷಜೀವನಕ್ಕಾಗಿ ವಿವಾಹವಿಷಯದಲ್ಲಿ ಮುಖ್ಯವಾಗಿ ನೋಡಬೇದಂತದ್ದೇನು ಅಂದರೇ

  1. ಹುಡ್ಗ/ಹುಡ್ಗಿ ಮನಸ್ಸು ಚೆನ್ನಾಗಿರಬೇಕು. ಹೊಂದುಕೊಂಡು ಹೋಗುವಂತ ಸ್ಥಿತಿ ಯಿರಬೇಕು. ಇದು ಇದ್ದಲ್ಲಿ ಮಾತ್ರವೇ ಮನೆ ಜನರ ಜೊತೆ ಮತ್ತು ಬಂದುಬಳಗರ ಜೊತೆ ಸಂತೋಷವಗಿರಲು ಸಾಧ್ಯವಾಗುತ್ತದೆ.
  2. ನೋಡುವುದಕ್ಕೆ ಚೆನ್ನಾಗಿರಬೇಕು ಅಂದರೇ ನಾವು ಆಯ್ಕೆ ಮಾಡುವವರು ತನ್ನ ಮಗ/ಮಗಳಿಗೆ ಮಾತ್ರ ಚೆನ್ನ ಅಂತೆನಿಸಬೇಕು. ಬೇರೆ ಅವರಿಗಲ್ಲ. ನೋಡಿದವರೆಲ್ಲರೂ “ಚೆನ್ನಾಗಿದ್ದಾಳೆ/ಚೆನ್ನಾಗಿದ್ದಾನೆ” ಯೆನಿಸುವ ಹುಡ್ಗ/ಹುಡ್ಗಿ ಬೇಕು ಯೆನ್ನುವ ವಿಷಯದಲ್ಲಿ ಅರ್ಥವಿಲ್ಲ. ಅದು ಮುಂದೆ ನೋವನ್ನು ಕೊಡುತ್ತದೆ.
  3. ಹಣ ಇದ್ರು/ಇಲ್ಲದೇ ಇದ್ರು ಹೊಂದುಕೊಂಡು ಹೋಗುವಂತಹ ತಾಳ್ಮೆಯಿರಬೇಕು. ಜೀವನದಲ್ಲಿ ಕಷ್ಟಗಳು ಎಲ್ಲರಿಗೂ ಬರುತ್ತದೆ. ಕಷ್ಟ ಬಾರದೇ ಇರುವುದು ಸಾಧ್ಯವೇ ಇಲ್ಲ. ಕೇವಲ ಸುಖಕ್ಕೆ ಬೇಕಾದ ವಿಷಯಗಳನ್ನು ಮಾತ್ರ ನೋಡಿದರೇ, ದುಃಖಬಂದಾಗ ತಾಳ್ಮೆ ಯಿಲ್ಲದೇ ಇದ್ರೆ, ಜೀವನ ನರಕಪ್ರಾಯವಾಗುತ್ತದೆ. ವೈವಾಹಿಕ ಜೀವನ ನಡಿಸುವುದಕ್ಕೆ ಅತಿ ಮುಖ್ಯವಾದದ್ದು ಹಣ, ಉದ್ಯೋಗ, ಆಸ್ತಿಪಾಸ್ತಿಗಳಲ್ಲ. ವಿಶ್ವಾಸ ಇರಬೇಕು. ಇಬ್ಬರಮದ್ಯ ಅಪಾರವಾದ ನಂಬಿಕೆ ಇರಬೇಕು. ಈ ನಂಬಿಕೆ ಇಲ್ಲದ ದಿನ ವೈವಾಹಿಕ ಜೀವನ ವಿಚ್ಚಿನ್ನವಾಗುತ್ತದೆ.
  4. ಸುಖ, ಹಣ, ಭೋಗ ಇವುಗಳ ಇದ್ದಾಗ ಮಾತ್ರ ಪ್ರೀತಿಸುವುದಲ್ಲ. ಸಹಜವಾಗಿ ಪ್ರೀತಿಸುವ ಹುಡ್ಗ/ಹುಡ್ಗಿಗಾಗಿ ಬಯಸಬೇಕು. ಇಂತಹಪ್ರೀತಿಯನ್ನೇ “ಅಂದ” ಅಂತ ಕರೆಯುತ್ತಾರೆ. ಇದು ಒಳಗಿನ ಅಂದ ಮತ್ತು ಆನಂದ. “ಅಂದ” ವೆನ್ನುವುದು ಹೊರಗೆ ತೋರ್ಪಡುವುದು ಅಲ್ಲ. ಹೊರಗೆ ತೋರ್ಪಡುವ “ಅಂದ” ಎಲ್ಲರಲ್ಲಿ ಮೋಹವನ್ನುಂಟುಮಾಡುತ್ತದೆ. ಒಳಗಿನ ಅಂದ ಹುಡ್ಗ/ಹುಡ್ಗಿ ಯರಲ್ಲಿ ಪ್ರೀತಿಯನ್ನು ಉಂಟುಮಾಡುತ್ತದೆ.
  5. ಮನುಷ್ಯನ ಜೀವನದಲ್ಲಿ ಈ ಕ್ಷಣ ಇದ್ದದ್ದು ಮತ್ತೊಂದು ಕ್ಷಣ ಇಲ್ಲದೇ ಹೋಗಬಹುದು. ಈ ಕ್ಷಣ ಇಲ್ಲವಾದದ್ದನ್ನು ಮುಂದೆ ಪಡಿಬಹುದು. ಇಂತಹ ತಾತ್ಕಾಲಿಕವಾದ ಹಣ, ಐಶ್ವರ್ಯ, ಅಧಿಕಾರ, ಉದ್ಯೋಗಗಳನ್ನು ಬಯಸುವುದು ಮೂರ್ಖತ್ವ. ಇದು ನಮ್ಮ ಸನಾತನ ಸಾಂಪ್ರದಾಯವಲ್ಲ.

     ಮೇಲೆ ತಿಳಿಸಿರುವ ಗುಣಗಳು(ಬಯಸಬೇಕಾದ) ಇದೆಯೋ ಅಥವ ಇಲ್ಲವೋ ಯೆನ್ನುವ ವಿಚಾರ ಜಾತಕವನ್ನು ನೋಡುವಾಗ ಅರಿವಾಗುತ್ತದೆ. ಆದರೆ ಇವತ್ತಿನ ಸಮಾಜ ಈ ಲಕ್ಷಣಗಳನ್ನು ಬಯಸುವ ಜನರೇ ಇಲ್ಲವಾಗಿದೆ. ಹಾಗಾಗಿ ಜ್ಯೋತಿಷರಿಗೆ ಕೂಡಾ ಈತರನೋಡುವುದು ವ್ಯರ್ಥ ಅಂತಾಗಿದೆ. ಕೇವಲ ಜನರು ಬಯಸುವ ಲಕ್ಷಣಗಳು ಜಾತಕದಲ್ಲಿದೆಯೋ ಇಲ್ಲವೋ ಅಷ್ಟು ಮಾತ್ರ ನೋಡಿ/ತಿಳಿಸಿ ಮಂತ್ರ-ಜಪ-ಹೋಮ-ಹವನಾದಿಗಳನ್ನು ಸೂಚನೆಮಾಡಿ ತಮ್ಮ ಕರ್ತವ್ಯ ಮುಕ್ತಾಯವಾಯಿತು ಯೆನ್ನುವ ಸ್ಥಿತಿಗೆ ಬಂದಾಗಿದೆ. ಶೋಚನೀಯ.

No comments:

Post a Comment

Note: only a member of this blog may post a comment.

“ನನ್ನ ಮಗಳ ಮದುವೆ ಯಾವಾಗ ಆಗುತ್ತದೆ…?”

     ಕಳದ ಶನಿವಾರ ಬೆಂಗಳೂರಿನಿಂದ ಒಬ್ಬ ತಾಯಿ ತನ್ನ ಮಗಳ ಮದುವೆಗಾಗಿ ಜಾತಕವನ್ನು ತೋರಿಸುವುದಕ್ಕೆ ಬಂದಿದ್ದರು. ತಾಯಿ: “ನನ್ನ ಮಗಳು ಭಾರತದಲ್ಲಿ BE...