Friday 20 September 2019

ಹಣಸಂಪಾದನೆ-ಧರ್ಮಾಚರಣೆ-1


“ಹಣ” ಹಣದ ಬಗ್ಗೆ ಪ್ರಸ್ತಾವನೆ ಬಂದಾಗ ವೇದವು ಈರೀತಿ ಹೇಳುತ್ತದೆ.

ವೇದಮೂಲಮಿದಂ ಬ್ರಾಹ್ಮಂ
ಭಾರ್ಯಾಮೂಲಮಿದಂ ಗೃಹಂ
ಕೃಷಿಮೂಲಮಿದಂ ಧಾನ್ಯಂ
ಧನಮೂಲಮಿದಂ ಜಗತ್


    “ವೇದಮೂಲಮಿದಂ ಬ್ರಾಹ್ಮಂ” – ಬ್ರಹ್ಮಜ್ಞಾನವನ್ನು ಪಡೆದವನು ಬ್ರಾಹ್ಮಣ. ಈ ಲೋಕವೆಲ್ಲವೂ ಮನುಷ್ಯಜನ್ಮದ ಸಾರ್ಥಕತ್ವವನ್ನು ಹೊಂದುವುದಕ್ಕೆ ಬೇಕಾದ ಮಾರ್ಗವನ್ನು ಸೂಚಿಸುವವನು ಬ್ರಾಹ್ಮಣ. ಬ್ರಾಹ್ಮಣ ವೇದವನ್ನು ಪ್ರಮಾಣವಾಗಿಟ್ಟುಕೊಂಡು ಜೀವನಮಾಡುತ್ತಾನೆ. ಶಾಸ್ತ್ರವನ್ನು ಅಧ್ಯಯನ ಮಾಡಿ ಮನುಷ್ಯಜನ್ಮವನ್ನು ಹೇಗೆ ಸಾರ್ಥಕಪಡಿಸಿಕೊಳ್ಳಬೇಕು, ಮನುಷ್ಯನ ಗಮ್ಯವೇನು ಎನ್ನುವ ವಿಚಾರವನ್ನು ಶಾಸ್ತ್ರದ ಚೌಕಟ್ಟಿನಲ್ಲಿ ಲೋಕಕ್ಕೆ ಸಾರುತ್ತಾನೆ. ಮನುಷ್ಯನಿಗೆ ಪ್ರಮಾಣವಾಗಿರುವ ಶೃತಿ, ಸ್ಮೃತಿ, ಪುರಾಣ, ಶಿಷ್ಟಾಚಾರ ಮೊದಲಾದವು ಬ್ರಾಹ್ಮಣನಿಂದ ಲೋಕಕ್ಕೆ ಪ್ರಚಾರವಾಗುತ್ತಲಿದೆ. ಹಾಗಾಗಿ ಬ್ರಾಹ್ಮಣನ ಜೀವನಕ್ಕೆ ವೇದವು ಆಧಾರ. ವೇದವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ವೇದ ಪ್ರಮಾಣವನ್ನು ಪ್ರಧಾನವಾಗಿ ಸ್ವೀಕರಿಸಿ ಮಾತಾಡುವ ಸ್ಥಿತಪ್ರಜ್ಞನಾದವನು ಬ್ರಾಹ್ಮಣ.



ಭಾರ್ಯಾಮೂಲಮಿದಂ ಗೃಹಂ”. ನಾವು ಒಂದು ವಯಸ್ಸು ಬಂದಮೇಲೆ ಬ್ರಹ್ಮಚರ್ಯಾಶ್ರಮದಿಂದ ಗೃಹಸ್ತಾಶ್ರಮಕ್ಕೆ ಬದಲಾಗುತ್ತೇವೆ. ಗೃಹಸ್ತಾಶ್ರಮಕ್ಕೆ ಬದಲಾಗುವುದೆಂದರೆ ಕೇವಲ ಮನೆ ಬದಲಾಗುವುದಲ್ಲ. ಪತ್ನಿಯನ್ನು ಸ್ವೀಕಾರಮಾಡುವುದು ಅಂತ ಅರ್ಥ. ಯಜ್ಞವು ಮಾಡುವುದಕ್ಕೆ ಅಧಿಕಾರವನ್ನು ವುಂಟುಮಾಡುವ ಸ್ತ್ರೀ, ಪಕ್ಕದಲ್ಲಿ ಕೂತುಕೊಳ್ಳುವ ಅಧಿಕಾರವನ್ನು ಹೊಂದಿರುವಂತ ಪತ್ನಿ “ಧರ್ಮಪತ್ನಿ”. ಧರ್ಮಪತ್ನಿಯನ್ನು ಸ್ವೀಕರಿಸಿದ ಆಶ್ರಮ ಆದ ಕಾರಣ ಆ ಆಶ್ರಮದಲ್ಲಿ ಪ್ರಧಾನ ಯಾರು ಅಂದರೆ ಸಹಧರ್ಮಚಾರಿಣಿ(ಹೆಂಡತಿ). ವಿವಾಹಮಂತ್ರಗಳ ಆಧಾರವಾಗಿ ಪುರುಷನ ಸಮಸ್ತ ಐಶ್ವರ್ಯವು ಧರ್ಮಪತ್ನಿಗೇ ಸೇರುತ್ತದೆ. ಧಾನಮಾಡುವ ಪ್ರಸಂಗಬಂದಾಗ ಸಮಸ್ತ ಐಶ್ವರ್ಯ ಶಾಸ್ತ್ರಪ್ರಕಾರ ಧರ್ಮಪತ್ನಿಯೇ ಹಕ್ಕುದಾರಳು ಹಾಗಾಗಿ ಪತ್ನಿಯ ಐಶ್ವರ್ಯವನ್ನು ಪುರುಷಧಾನ ಮಾಡುತ್ತಾನೆ, ಪುರುಷನಿಗೆ ಪ್ರತ್ಯೇಕವಾಗಿ ತನ್ನದು ಅಂತ ಏನು ಇರುವುದಿಲ್ಲ. ಹಾಗಾಗಿ ಆಶ್ರಮವನ್ನು ಬದಲಾವಣೆ ಆಗುವ ಸಮಯದಲ್ಲಿ ವೇದವನ್ನುಪ್ರಮಾಣವಾಗಿ ಇಟ್ಟುಕೊಂಡು ನಾವು ಮಾತಾಡಬೇಕಾಗಿಬಂದರೆ ಐಶ್ವರ್ಯವೆಲ್ಲವು ಧರ್ಮಪತ್ನಿಗೇ ಸೇರುತ್ತದೆ. ಹಾಗಾಗಿ “ಭಾರ್ಯಾಮೂಲಮಿದಂ ಗೃಹಂ”. ಹೆಂಡತಿ ಇಲ್ಲದ ದಿನ ಆ ಮನೆಗೆ ಅಂದವು ಇರುವುದಿಲ್ಲ, ಅದನ್ನು ಮನೆಯಾಗಿ ಯಾರು ಕರೆಯುವುದಿಲ್ಲ. ಪುರುಷನ ಶಾಂತಿ ಸ್ಥಾನ ಧರ್ಮಪತ್ನಿಯೇ ಆಗಿದ್ದಾಳೆ. ಪುರುಷನ ಪಿತೃಋಣವು ಈಡೇರುವುದಕ್ಕೆ, ಸಂತಾನವನ್ನು ಪಡೆಯುವುದಕ್ಕೆ ಕಾರಣವಾದಂತ ಧರ್ಮಕ್ಷೇತ್ರವು ಧರ್ಮಪತ್ನಿಯೇ. ದೇವತಾಋಣ ಈಡೇರುವುದಕ್ಕೆ ಒಂದು ಯಜ್ಞವನ್ನು ಮಾಡಬೇಕಾದರೆ ಹೆಂಡತಿ ಪಕ್ಕದಲ್ಲಿ ಕುಳಿತುಕೊಳ್ಳಬೇಕು. ತನಗೆ ಹುಟ್ಟಿದ ಹೆಣ್ಣುಮಕ್ಕಳನ್ನು ಕನ್ಯಾಧಾನವು ಮಾಡಬೇಕಾದರೂ ಪಕ್ಕದಲ್ಲಿ ಹೆಂಡತಿ ಯಿರಲೇಬೇಕು. ಹೆಂಡತಿ ಯಿಲ್ಲದ ದಿನ ಪುರುಷನಿಗೆ ವೈಧಿಕಧರ್ಮವನ್ನು ಆಚರಿಸುವುದಕ್ಕೆ ಅಧಿಕಾರವಿರುವುದಿಲ್ಲ. ಯಾವುದೇತರದ ಪುಣ್ಯಕಾರ್ಯವು ಶೋಭಿಸುವುದಿಲ್ಲ. ಹಾಗಾಗಿ “ಭಾರ್ಯಾಮೂಲಮಿದಂ ಗೃಹಂ”.  

   ನಮಗೆ ತಿನ್ನುವುದಕ್ಕೆ ಯೋಗ್ಯವಾದಂತ ಬೀಜಗಳು/ಹಣ್ಣುಗಳು ಸಿಗಬೇಕಾದರೆ “ಕೃಷಿಮೂಲ ಮಿದಂ ಧಾನ್ಯಂ”. ಬೇಸಾಯವನ್ನು ಪ್ರಧಾನವಾಗಿಟ್ಟುಕೊಂಡು, ಭೂಮಿಯನ್ನು ಉಳಿದು, ಬೀಜಗಳನ್ನು ಹಾಕಿ, ಬೆಳೆಯುವಂತೆ ಮಾಡಿ, ಬೆಳದಂತ ಸಸ್ಯಗಳನ್ನು ರಕ್ಷಣೆಮಾಡಿ, ಚೀಡೆ-ಹುಳ ಹಿಡಿಯದಂತೆ ನೋಡಿ, ಸರಿಯಾದ ಸಮಯದಲ್ಲಿ ಸಸ್ಯಗಳನ್ನು ಕತ್ತರಿಸಿ, ಬೀಜಗಳನ್ನು ಬಿಡಿಸಿ, ಭದ್ರಮಾಡಿ ಸಮಾಜದ ಜನರಿಗೆ ಕೊಡುವುದಕ್ಕೆ ಸಿದ್ಧವಾಗಿರುವಂತೆ ಮಾಡಿ, ಕೊನೆ ತನಕ ಕಷ್ಟಗಳನ್ನು ಪಡುವನು ರೈತ. ಇಂತಹ ರೈತನು ಇಲ್ಲದಿದ್ದರೆ ನಮಗೆ ಅನ್ನವು ಸಿಗುವುದಿಲ್ಲ. ಹಾಗಾಗಿ “ಕೃಷಿಮೂಲಮಿದಂ ಧಾನ್ಯಂ”.


    “ಧನಮೂಲಮಿದಂ ಜಗತ್”. ನಮ್ಮ ಮಾಂಸನೇತ್ರಗಳಿಗೆ ಕಾಣಿಸುವುದೆಲ್ಲ ಜಗತ್ತು ಯೆನ್ನುತ್ತಾರೆ. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ಥುವಿಗು ಹುಟ್ಟುವ ತಾರೀಖು ಮತ್ತು ನಾಶವಾಗುವ ತಾರೀಖು ಇರುತ್ತದೆ. ಜನನ-ಮರಣ ಚಕ್ರದಲ್ಲಿ ಬೆರತುಹೋಗಿರುವಂತ ಸಮಸ್ತ ಪ್ರಪಂಚವನ್ನು ಜತತ್ತು ಯೆನ್ನುತ್ತಾರೆ. ಹಾಗಾಗಿ ಧನಮೂಲಮಿದಂ ಜಗತ್ ಅಂದರೇ ಜಗತ್ತು ಯಾವುದರಮೇಲೆ ಆಧಾರಪಟ್ಟಿರುತ್ತದೆಯೆಂದರ ಹಣದಮೇಲೆ ಆಧಾರಪಟ್ಟಿರುತ್ತದೆ.

    ಹಣದ ವಿಷಯದಲ್ಲಿ ಮನುಷ್ಯನಾದವನು ಕೆಲವಿನ ಜಾಗ್ರತ್ತೆಗಳನ್ನು ತೊಗೊಳ್ಲಬೇಕಾಗುತ್ತದೆ. ಹಣಸಂಪಾದನೆ ಮಾಡಬಾರದು ಅಂತಾಗಲಿ, ಹಣವನ್ನು ದ್ವೇಷಮಾಡು ಅಂತಾಗಲಿ, ಹಣದ ಸಹವಾಸ ಮಾಡಬೇಡ ಅಂತಾಗಲಿ, ಹಣವನ್ನು ಕೂಡಿಡುವುದು ಮಾಡಬಾರದು ಅಂತಾಗಲಿ ಯಾವ ಶಾಸ್ತ್ರವು ಹೇಳಲಿಲ್ಲ. ಹಣವನ್ನು ಆರ್ಜನಮಾಡಲೇಬೇಕು ಅಂತ ಶಾಸ್ತ್ರಗಳು ಸಹಾ ಗೋಷಿಸುತ್ತಿವೆ. ಹಣವನ್ನು ಸಂಪಾದನೆ ಮಾಡದ ಪಕ್ಷದಲ್ಲಿ ಆಗುವ ಅನರ್ಥಗಳನ್ನು ಕೂಡಾ ಶಾಸ್ತ್ರವು ನಮಗೆ ತಿಳಿಸುತ್ತದೆ.

ಮಾತಾ ನಿಂದತಿ ನಾಭಿನಂದತಿ ಪಿತಾ ಭ್ರಾತಾ ನ ಸಂಭಾಷತೇ
ಭೃತ್ಯಃ ಕುಪ್ಯತಿ ನಾನುಗಚ್ಛತಿ ಸುತಃ ಕಾಂತಾ ಚ ನಾಲಿಂಗತೇ |
ಅರ್ಥಪ್ರಾರ್ಥನಶಂಕಯಾ ನ ಕುರುತೇSಪ್ಯಾಲಾಪಮಾತ್ರಂ ಸುಹೃತ್
ತಸ್ಮಾದ್ದ್ರವ್ಯಮುಪಾರ್ಜಯಾಶು ಸುಮತೇ ದ್ರವ್ಯೇಣ ಸರ್ವೇ ವಶಾಃ ||


    ಸಹಜವಾಗಿ ಹೆತ್ತತಾಯಿ ಮಕ್ಕಳನ್ನು ಬಯ್ಯುವುದಿಲ್ಲ. ಅಂತಹ ತಾಯಿ ಯುಕ್ತವಯಸ್ಕನಾದ ಮಗ ಸಂಪಾದನೆ ಮಾಡದಿದ್ದರೆ ನಿಂದಿಸುತ್ತಾಳೆ. ತಂದೆ ಮಗನ ಭುಜವನ್ನು ತಟ್ಟಿ ಅಭಿನಂದಿಸುವುದಿಲ್ಲ. ಜೊತೆಗೆ ಹುಟ್ಟಿದ ಅಣ್ನತಮ್ಮಂದರು ಮಾತನಾಡುವುದಿಲ್ಲ,  “ಇವನಿಗೆ ಸಣ ಸಂಪಾದನೆ ಯಿಲ್ಲ ನಮ್ಮಮೇಲೆ ಆಧಾರಪಟ್ಟು ಜೀವನ ಮಾಡುತಿದ್ಧಾನೆ” ಯೆನ್ನುತ್ತಾರೆ. ಸೇವಕನನ್ನು ಕರದರೆ ಬರುವುದಿಲ್ಲ. ಸಂಪಾಧನೆ ಮಾಡದ ತಂದೆ ಮನೆಗೆ ಬಂದರೆ ಮಗನಾದವನು ಗೌರವಿಸುವುದಿಲ್ಲ. ಸಂಪಾಧನೆ ಯಿಲ್ಲದ/ಮಾಡದ ಗಂಡನನ್ನು ಹೆಂಡತಿ ಪ್ರೀತಿಯಿಂದ ಆಲಿಂಗನೆ ಮಾಡಿಕೊಳ್ಳುವುದಿಲ್ಲ. ಇವನು ಎಲ್ಲಿ ಹಣವನ್ನು ಕೇಳುತ್ತಾನೋ ಅಂತ ತಿಳಿದು ಮಿತ್ರರಾದವರು ಕಾಣಿಸದೆ ಸಂಚಾರಮಾಡುತ್ತಾರೆ. ಆದಕಾರಣ “ಓ ಮನುಜನೇ! ಹಣವನ್ನು ಸಂಪಾಧನೆಮಾಡು. ಆದರೆ ಪ್ರಾಮಾಣಿಕನಾಗಿ, ನಿಯತೆಲಿಂದ ಸಂಪಾದನೆಮಾಡುವುದನ್ನು ಜೀವನದಲ್ಲಿ ಅಲವಡಿಸಿಕೋ”. ಅಂತ ಶಾಸ್ತ್ರ ಹೇಳುತ್ತದೆ. ನಿಯತಿಗೆ ಇನ್ನೊಂದುಮಾತು ಧರ್ಮ. “ಧರ್ಮವು ತಪ್ಪದೇ ಸಂಪಾದನೆಮಾಡಿದ ದ್ರವ್ಯ ದಿಂದ ಸಮಸ್ತವು ನಿನಗೆ ವಶವಾಗುತ್ತದೆ, ಅನುಭವೈಕಯೋಗ್ಯವಾಗುತ್ತದೆ.” ಅಂತ ಶಾಸ್ತ್ರವು ನಮಗೆ ತಿಳಿಸುತ್ತದೆ. ಧರ್ಮವನ್ನು ಬಿಟ್ಟು ದ್ರವ್ಯವನ್ನು ಸಂಪಾಧನೆ ಮಾಡಿದ  ಪಕ್ಷದಲ್ಲಿ ಆ ದ್ರವ್ಯವು ಪ್ರಮಾದಕಾರಿ ಆಗುತ್ತದೆ ಮತ್ತು ಯಾವಾಗ ಈ ಮನುಷ್ಯನನ್ನು ಸುಡೋಣ ಅಂತ ಕಾಯುತ್ತಿರುತ್ತದೆ. ಹಾಗಾಗಿ ಧರ್ಮವನ್ನಿ ಬಿಟ್ಟು ಯಾವಾಗಲು ಸಂಪಾಧನೆಮಾಡಬೇಡ ಯೆನ್ನುವಮಾತು ಶಾಸ್ತ್ರಕಾರರ ಪ್ರತಿಪಾಧನೆ.
ಮುಂದುವರಿಯುತ್ತದೆ……

No comments:

Post a Comment

Note: only a member of this blog may post a comment.

“ನನ್ನ ಮಗಳ ಮದುವೆ ಯಾವಾಗ ಆಗುತ್ತದೆ…?”

     ಕಳದ ಶನಿವಾರ ಬೆಂಗಳೂರಿನಿಂದ ಒಬ್ಬ ತಾಯಿ ತನ್ನ ಮಗಳ ಮದುವೆಗಾಗಿ ಜಾತಕವನ್ನು ತೋರಿಸುವುದಕ್ಕೆ ಬಂದಿದ್ದರು. ತಾಯಿ: “ನನ್ನ ಮಗಳು ಭಾರತದಲ್ಲಿ BE...