Thursday 26 September 2019

ಹಣಸಂಪಾದನೆ-ಧರ್ಮಾಚರಣೆ-2

  
     
     ಭಗವಂತ ಸೃಷ್ಠಿಮಾಡಿದ 84 ಲಕ್ಷಜೀವರಾಶಿಗಳಲ್ಲಿ “ಹಣ” ವೆನ್ನುವುದು ಒಬ್ಬ ಮನುಷ್ಯನಿಗೆ ಮಾತ್ರ ಅನ್ವಯವಾಗುತ್ತದೆ ಉಳದ 83,99,999 ಜೀವಿಗಳಿಗೆ ಹಣದ ಜೊತೆ ಸಂಭಂದವಿಲ್ಲ ಮತ್ತು ಅವಶ್ಯಕತೆಯೂ ಇಲ್ಲ. ಈ ಜೀವಿಗಳಿಗೆ ಕತೃತ್ವವು ಬಹಳ ಸ್ವಲ್ಫವಾಗಿರುತ್ತದೆ. ಅವುಗಳಿಗೆ ಪಾಪ-ಪುಣ್ಯಗಳು ಸಂಭಂದ ಇಲ್ಲ. ಅವುಗಳಿಗೆ ಬೇಕಾದಂತಹ ವ್ಯವಸ್ತೆಯನ್ನು ಭಗವಂತ ತಮ್ಮ ಶರೀರದಲ್ಲಿಯೇ ಸೃಷ್ಠಿಸಿದ್ದಾನೆ. ಉದಾಹರಣೆಗೆ ಒಂದು ಎತ್ತು(ox) ತನ್ನನು ತಾನು ರಕ್ಷಣೆಮಾಡಿಕೊಳ್ಳುವುದಕ್ಕೆ ಒಂದು ತುಪಾಕಿಯನ್ನಾಗಲಿ, ಅದರಲ್ಲಿ ಉಪಯೋಗಿಸುವ ಗುಂಡುಗಳನ್ನಾಗಲಿ, ತುಪಾಕಿಯನ್ನು ಉಪಯೋಗಿಸುವ ಶಕ್ತಿಯನ್ನಾಗಲಿ ಭಗವಂತ ಕೊಟ್ಟಿಲ್ಲ. ಅವುಗಳಿಗೆ ಎರಡು ಚೂಪಾದ ಕೊಂಬುಗಳನ್ನು ಇಟ್ಟೀದ್ದಾನೆ. ಯಾರದರೂ ಎತ್ತಿಗೆ ತೊಂದರೆಯನ್ನು ಕೊಟ್ಟರೆ ಕೊಂಬುಗಳಿಂದ ಚುಚ್ಚಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವ ವ್ಯವಸ್ತೆಮಾಡೀದ್ದಾನೆ ಭಗವಂತ. ಒಂದು ಹುಲಿಗೆ ಬಲವಾದ ಉಗುರುಗಳನ್ನು ಕೊಟ್ಟೀದ್ದಾನೆ ತನನ್ನು ತಾನು ರಕ್ಷಣೆಮಾಡೀಕೊಳ್ಳುವುದಕ್ಕಾಗಿ ಮತ್ತು ಬೇಟೆಯಾಡುವುದಕ್ಕಾಗಿ. ಒಂದು ಆನೆಗೆ ಬಲವಾದ ಸೊಂಡಿಲವನ್ನು ಕೊಟ್ಟಿದ್ದಾನೆ ಯಾರದರು ತೊಂದರೆ ಕೊಟ್ಟರೆ ಸೊಂಡಿಲದಿಂದ ಯೆಸೆಯುವುದಕ್ಕಾಗಿ. ಒಂದು ಕುರಿಗೆ ಶರೀರದ ತುಂಬಾ ಉಣ್ಣೆಯನ್ನು ಕೊಟ್ಟಿದ್ದಾನೆ ಚಳಿಯಿಂದ ತನ್ನನು ತಾನು ರಕ್ಷಣೆಮಾಡಿಕೊಳ್ಳುವುದಕ್ಕಾಗಿ. ಒಂದು ಹದ್ದಿಗೆ ಎರಡು ಬಲವಾದ ರೆಕ್ಕೆಗಳನ್ನು ಕೊಟ್ಟೀದ್ದಾನೆ ಅದರ ಸಹಾಯದಿಂದ ಮೇಲಕ್ಕೆ ಹಾರುವುದಕ್ಕಾಗಿ. ಹೀಗೆ ಪ್ರತಿವೊಂದು ಜೀವಿಗು ಅವಸರವಾದ ರಕ್ಷಣೆಯನ್ನು ಭಗವಂತ ಮಾಡಿಕೊಟ್ಟಿದ್ದಾನೆ. ಆದರೆ ಮನುಷ್ಯಪ್ರಾಣಿಗೆ ಮಾತ್ರ ಈ ವ್ಯವಸ್ಥೆಗಳು ಯಾವೂ ಕೊಟ್ಟಿಲ್ಲ. ತನ್ನನು ತಾನು ರಕ್ಷಣೆಮಾಡಿಕೊಳ್ಳುವುದಕ್ಕೆ ಪ್ರತ್ಯೇಕವಾಗಿ ಯಾವ ಸಾಧನವನ್ನು ಭಗವಂತ ಮನುಷ್ಯನ ಶರೀರದಲ್ಲಿ  ಇಟ್ಟಿಲ್ಲ. ಇದಕ್ಕೆ ಕಾರಣ ಮನುಷ್ಯನಿಗೆ ಯೆಲ್ಲಜೀವಿಗಳಿಗಿಂತಲು ದೊಡ್ಡದಾದ ಮತ್ತು ಪ್ರತ್ಯೇಕವಾದಂತಹ ಒಂದು ವ್ಯವಸ್ಥೆಯನ್ನು ಇಟ್ಟಿದ್ದಾನೆ. ಭಗವಂತ ಮನುಷ್ಯನಿಗೆ ಎರಡು ವಿಶೇಷವಾದ ಮತ್ತು ಪ್ರತ್ಯೇಕವದಂತಹ ಎರಡು ಸಾಧನೆಗಳನ್ನು ಕೊಟ್ಟೀದ್ದಾನೆ.  ಅವುಗಳಲ್ಲಿ ಒಂದು “ಬುದ್ಧಿ” ಮತ್ತೊಂದು “ಮಾತು”. ಭಗವಂತ ಉಳದ ಜೀವಿಗಳಿಗೆ ಕೊಟ್ಟಂತಹ ಸಾಧನೆಗಳನ್ನು ಮನುಷ್ಯ ತನ್ನ ಬುದ್ಧಿ ಮತ್ತು ಮಾತು ಸಹಾಯದಿಂದ ಪಡೆದು ಅನುಭವಿಸುತ್ತಾನೆ. ಬುದ್ಧಿಯಿಂದಲೇ ಮನುಷ್ಯನಿಗೆ ಆ ಶಕ್ತಿ ಬಂದಿದೆ ಹಾಗಾಗಿ ಮನುಷ್ಯ ಬುದ್ಧಿಯನ್ನು ಉಪಯೋಗಮಾಡಿ ತಾನು ಮೀನಿನಂತೆ ನೀರಿನಲ್ಲಿ ಪ್ರಯಾಣಮಾಡುತ್ತಾನೆ. ಪಕ್ಷೀಯಂತೆ ವಿಮಾನದಲ್ಲಿ ಆಕಾಶಮಾರ್ಘದಲ್ಲಿ ಸಂಚಾರಮಾಡೂತ್ತಾನೆ, ಕುದರೆಯಂತೆ ವೇಗವಾಗಿ ಒಂದು ವಾಹನದಲ್ಲಿ ಸಂಚಾರಮಾಡುತ್ತಾನೆ. ಒಂದು ಎತ್ತು ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಕೊಂಬುಗಲನ್ನು ಹೇಗೆ ಬಳಿಸಿಕೊಳ್ಳುತ್ತದೆಯೋ ಅದೇರೀತಿ ಮನುಷ್ಯ ತನ್ನನ್ನು ತಾನು ರಕ್ಷಣೆಮಾಡಿಕೊಳ್ಳುವುದಕ್ಕೆ ಒಂದು ಕತ್ತಿಯನ್ನಾಗಲಿ, ತುಪಾಕಿಯನ್ನಾಗಲಿ ಉಪಯೋಗಿಸುವ ಶಕ್ತಿಯನ್ನು ಬುದ್ದಿ ಸಹಾಯದಿಂದ ಹೊಂದುತ್ತಿದ್ದಾನೆ. ಮಲ್ಲಯುದ್ದವನ್ನು ಕಲಿಯುತ್ತಾನೆ. ಕುರಿಯ ಉಣ್ಣೆಯನ್ನು ಕತ್ತರಿಸಿ ಚಳಿಯಿಂದ ರಕ್ಷಣೆಮಾಡಿಕೊಳ್ಳುವುದಕ್ಕೆ ವಸ್ತ್ರಗಳನ್ನು ಮಾಡಿಕೊಳ್ಳುತಿದ್ದಾನೆ. ಭಗವಂತ ಎಲ್ಲ ಪ್ರಾಣಿಗಳಿಗೆ ಏನೇನು ಪ್ರತ್ಯೇಕವಾದಂತ ವ್ಯವಸ್ಥೆಯನ್ನು ಮಾಡಿದ್ದಾನೋ ಅವುಗಳನ್ನೆಲ್ಲವನ್ನೂ ತನ್ನದಾಗಿ ಬಳಿಸಿಕೊಳ್ಳುವ ದಕ್ಷತೆ ಬುದ್ಧಿಯಿಂದ ಮನುಷ್ಯನಿಗೆ ಆಗಿದೆ. ಇಂತಹ ಆಪಾರವಾದ ಶಕ್ತಿಯುಳ್ಲದ್ದಾದ ಬುದ್ಧಿಯಿಂದ ಈಲೋಕದಲ್ಲಿ  ಹಣವನ್ನು ಸೃಷ್ಟಿಮಾಡಿದ್ದಾನೆ ಮನುಷ್ಯ.    



          ಹಣದಬಗ್ಗೆ ಮತ್ತಿಷ್ಟು ಆಳವಾಗೆ ವಿಚಾರಮಾಡಿದರೆ     “ಹಣ”ವೆಂಬುವುದು ಚತುರ್ಮುಖನ ಸೃಷ್ಠಿಯಲ್ಲಿ ಬಂದ ಪದಾರ್ಥವಲ್ಲ. ಭಗವಂತ ಹಣವನ್ನು ಸೃಷ್ಠಿಮಾಡಲಿಲ್ಲ. ಚತುರ್ಮುಖ ಬ್ರಹ್ಮನ ಸೃಷ್ಠಿಯಲ್ಲಿ ಹಣವೆನ್ನುವ ಮಾತು ಇಲ್ಲ. ಭಗಂತ ಸೃಷ್ಠಿ ಮಾಡಿದ ಪದಾರ್ಥವೆ ಆದರೇ ಅದು ಎಲ್ಲಕಡೆಯೂ ಒಂದೇರೀತಿ ಪ್ರಯೋಜನವನ್ನು ಉಂಟುಮಾಡುತ್ತದೆ. ಉದಾಹರಣೆಗೆ ಭಗವಂತ ಸೃಷ್ಠಿಮಾಡಿದ ಒಂದು ಮಾವಿನ ಮರ ಭಾರತದಲ್ಲಾದರು ಅಮೆರಿಕದಲ್ಲಾದರು ಮಾವಿನಹಣ್ಣನ್ನೇ ಕೊಡುತ್ತದೆ. ಅದು ಬೇರೇ ಹಣ್ಣು ಕೊಡುವುದಿಲ್ಲ. ಆದರೆ ಅಮೆರಿಕದಲ್ಲಿ ಚಲಾವಣೆಯಲ್ಲಿರುವ ಡಾಲರು(USD) ಭಾರತದಲ್ಲಿ ಚಲಾವಣೆಗೆ ಬಾರದಂತಿರುವುದು, ಭಾರತದ ರೂಪಾಯಿ(INR) ಅಮೆರಿಕದಲ್ಲಿ ಚಲಾವಣಿಯಾಗದಂತಿರುವುದು ಭಗವಂತನ ಸೃಷ್ಠಿಗೆ ಸಂಭಂದಪಟ್ಟದ್ದಲ್ಲ. ಹಣವನ್ನು ಸೃಷ್ಠಿಮಾಡಿದವನು ಮನುಷ್ಯ. ಒಬ್ಬ ಹಿರಿಹ ವಿದ್ವಾಂಸ ಹೇಳುತ್ತಾನೆ “ಧರಿದ್ರವೆನ್ನುವ ಮಾತ ಪ್ರಾರಂಭವಾದದ್ದೆ ಹಣ ಬಂದನಂತರ” ಅಂತ. ಹಣದ ಸೃಷ್ಠಿಯಾದ ನಂತರವೇ ಮನುಷ್ಯನಿಗೆ ಸಂಪಾಧನೆ ಮಾಡಬೇಕುಯೆನ್ನುವ ಬಯಕೆ ಹೆಚ್ಚಾಯಿತು. ಬಯಕೆ, ಚಟ ಯೆನ್ನುವ ಮಾತ  ಹಣಸಂಪಾದನೆ ವಿಷಯಕ್ಕೆ ಅನ್ವಯವಾಗದಷ್ಟುಕಾಲ ಧ್ರವ್ಯಾರ್ಜನೆಯಲ್ಲಿ ಯಾವ ದೋಷವೂ ಇಲ್ಲ. ಇಲ್ಲಿ ಒಂದು ಪ್ರಶ್ನೆ ಬರಬಹುದು “ಒಂದುವೇಳ ಹಣವೆನ್ನುವುದು  ಭಗವಂತನ ಸೃಷ್ಠಿಯ ಪದಾರ್ಥ ಅಲ್ಲದಿದ್ದಲ್ಲಿ ಬೇರೇ ಯಾವ ಮಾತಿನಿಂದ ಅದು ಅನ್ವಯವಾಗುತ್ತಿತ್ತು?? ಯೆನ್ನುವ ವಿಷಯ ತಿಳಿಬೇಕಾಗುತ್ತದೆ”. ಹಣದ ಸೃಷ್ಟಿಯಾಗುವುದಕ್ಕಿಂತಲು ಮುನ್ನ ನಮ್ಮ ಪ್ರಾಚೀನರು ಬೇರೆ ಯಾವ ಅರ್ಥದಲ್ಲಿ ಸಂಭೋದಿಸುತ್ತಿದ್ದರು? ಅಂತ ತಿಳಿಬೇಕಾಗುತ್ತದೆ. ಹಣದ ಸೃಷ್ಟಿಯಾಗುವುದಕ್ಕಿಂತಲೂ ಪೂರ್ವ ಹಣಯೆನ್ನುವುದಕ್ಕೆ ಬದಲಾಗಿ “ಅರ್ಥ” ಮತ್ತು “ಅರ್ಥಾರ್ಜನೆ” ಯೆನ್ನುವ ಹೆಸರನ್ನು ಬಳಿಕೆಯಲ್ಲಿತ್ತು. ಹಾಗಾಗಿಯೇ ನಮ್ಮಲ್ಲಿ ಸಂಕಲ್ಪ/ಆಶೀರ್ವಾದ ಮಾಡುವಾಗ “ಧರ್ಮಾರ್ಥಕಾಮಮೋಕ್ಷ ಚತುರ್ವಿದ ಫಲಪುರುಷಾರ್ಥಸಿಧ್ಯರ್ಥಂ…….” ಅಂತ ಹೇಲುತ್ತಿದ್ದರು. 

     ಪುರುಷಾರ್ಥಗಳಲ್ಲಿ ಒಂದಾದ “ಅರ್ಥ” ಯೆನ್ನುವ ಮಾತಿಗೆ ಅರ್ಥವೇನೆಂದರೆ “ಸಮಸ್ಥವಾದಂತ ಭೋಗಗಳನ್ನು ಅನುಭವಿಸುವುದಕ್ಕೆ ಬೇಕಾದ ವಸ್ತು ಸಾಮಗ್ರಿಗಳನ್ನು ಸಂಗ್ರಹಣೆಮಾಡುವ ಜವಾಬ್ದಾರಿತನ”. ಈ ಜವಾಬ್ಧಾರಿಗೇ ಅರ್ಥವೆನ್ನುವ ಹೆಸರು. ಮನುಷ್ಯ ತಾನು ಸುಖಪಡುವುದಕ್ಕಾಗಿ  ಏನೇನು ಬಯಸುತ್ತಾನೋ ಅವುಗಳನ್ನೆಲ್ಲ ಪಡೆಯುವುದಕ್ಕೆ ಮತ್ತು ಅನುಭವಿಸುವುದಕ್ಕೆ ಬೇಕಾದಂತಹ ವಸ್ತು-ಸಾಮಗ್ರಿಗಳ ರಾಶಿಯನ್ನು “ಅರ್ಥ” ಅಂತ ಶಾಸ್ತ್ರ ಪ್ರತಿಪಾಧನೆ ಮಾಡಿದೆ.
         
      ಇನ್ನು ಭೋಗದ ವಿಚಾರಕ್ಕೆ ಬಂದರೆ ಮನುಷ್ಯನಲ್ಲಿ “ಭೋಗ” ಯೆನ್ನುವುದು ಅವರವರ ಮಟ್ಟಕ್ಕೆ ತಕ್ಕಂತೆ ಇರುತ್ತದೆ. ಎಲ್ಲರು ಬಯಸುವ ಭೋಗ ಒಂದೇರೀತಿ ಇರುವುದಿಲ್ಲ. ಒಬ್ಬನಿಗೆ ತಾಳೆಎಲೆ ಮನೆಯಲ್ಲಿ ನಿವಾಸಮಾಡುವುದು ಭೋಗ. ಮತ್ತೊಬ್ಬನಿಗೆ ರಸ್ತೆಯ ಪಕ್ಕದಲ್ಲಿ ಮಲಗುವುದು ಭೋಗ. ಹೀಗೆ ಕೆಲವರ ಭೋಗದ ಮಟ್ಟ ಅಷ್ಟುವರಿಗೇ ಮಾತ್ರ ಇರುತ್ತದೆ. ಇನ್ನು ಕೆಲವರ ಭೋಗ ಹೇಗಿರುತ್ತದೆಯೆಂದರೇ “ಬೇಸಿಗೆಯಲ್ಲಿ ಮನೆಯ ಹೊರಗೆ ಬಿಸಿ ಇದ್ದರೆ ಮನೆ ವೊಳಗೆ ತಂಪಾಗಿ ಇರುವಂತೆ ಮಾಡಿಕೊಳ್ಳುವುದು ಮತ್ತು ಮನೆಯ ಹೊರಗೆ ತಂಪಾಗಿದ್ದಲ್ಲಿ ಮನೆಯವೊಳಗೆ ಬಿಸಿ ಮಾಡಿಕೊಳ್ಳುದು ಅವರ ಭೋಗ”. ಇಂತಹ ಹೆಚ್ಚಿನ ಸುಖವನ್ನು ಬಯಸುವ ಮನುಷ್ಯ ತನ್ನ ಮನಸ್ಸು ಯಾವುದನ್ನು ಅಪೇಕ್ಷಿಸುತ್ತದೋ ಅಂತಹ ಭೋಗವನ್ನು ಪ್ರಕೃತಿ ನಿಯಮಕ್ಕೆ ವಿರೋದವಾಗಿಯಾದರೂ ನಿರ್ಮಾಣ ಮಾಡೀಕೊಂಡು ಅನುಭವಿಸುತ್ತಾನೆ. ಈತರ ಭೋಗವನ್ನು ನಿರ್ಮಾಣಮಾಡುವ ಪ್ರಯತ್ನ ಮನುಷ್ಯ ಮಾತ್ರ ಮಾಡುತ್ತಾನೆ. ಈ ನಿರ್ಮಾಣದಲ್ಲಿ ಬಂದ ಕ್ರಮವೇ “ಹಣ”.  ಮತ್ತು ಈ ಹಣದಿಂದ ಏನೇನು ಪರಿಣಾಮವಾಗುತ್ತದೆ ಯೆನ್ನುವುದನ್ನೂ ಸಹ ನೋಡೋಣ.

      “ಹಣ”ದಮೇಲೆ ಸರಿಯಾದ ಸ್ಪಷ್ಟತೆ ಮತ್ತು ಖಾಳಜಿ ಇಲ್ಲದ ದಿನ ಮನುಷ್ಯ ಇಂದ್ರಿಯತೃಷ್ಣೆಗೆ ವಶನಾಗುತ್ತಾನೆ. ತೃಷ್ಣೆ ಯೆನ್ನುವ ಮಾತಿನ ಅರ್ಥವೇನೆಂದರೆ ಕಡುಬಯಕೆ, ಭೋಗಲಾಲಸೆ, ಇಂದ್ರಿಯವ್ಯಾಮೋಹ ಅಥವ ಚಟ ಅಂತ. ಮನುಷ್ಯ ಇಂತಹ ತೃಷ್ಣೆಗೆ ವಶನಾದರೆ ತನ್ನಲ್ಲಿ ಜನಿಸುವ ಬಯಕೆಗಳಿಗೆ ಕೊನೆಯೇ ಯಿರುವುದಿಲ್ಲ. ಸಹಹವಾದ ಬಯಕೆಗಳನ್ನು ತೃಷ್ಣೆಯೆನ್ನುವುದಿಲ್ಲ. ಇಂದ್ರಿಯತೃಷ್ಣೆ ಅಂತ ಯಾವಗ ಕರೆಯುತ್ತಾರೆ ಅಂದರೆ ಮನುಷ್ಯನ ಮನಸ್ಸು ಬಯಕೆಗಳ ಹಿಂದೆ ಓಡುವುದು ಪ್ರಾರಂಭವಾಗುತ್ತದೆ. ಉದಾಹರಣೆಗೆ ಮರುಭೂಮಿಯಲ್ಲಿ ಸಂಚಿರಿಸುವ ಜಂತುಗಳೀಗೆ ಎಲ್ಲೋ ದೂರದಲ್ಲಿ ನೀರಿದ್ದಂತೆ ಕಾಣುತ್ತದೆ ಹತ್ತರ ಹೋದಾಗ ಅದು ನೀರು ಅಲ್ಲವೆನ್ನುವುದು ಗೊತ್ತಾಗುತ್ತದೆ. ಹಾಗೆ ಓಡುತ್ತಾ ಓಡುತ್ತಾ ನೀರು ಸಿಗದೆ ಪ್ರಾಣವನ್ನು ಬಿಡುತ್ತದೆ. ಬಾಯಾರಿಕೆ ಹೊಂದಿದ ಪ್ರಾಣಿಯನ್ನು ನೀರಿನಂತೆ ಕಾಣಿಸಿಕೊಂಡು ಓಡುವಂತೆ ಮಾಡಿ ಕೊಲ್ಲುವುದು ಯಾವುದುಯಿದೆಯೋ ಅದನ್ನೇ ಹಣದವಿಷಯದಲ್ಲಿ ಇಂದ್ರಿಯತೃಷ್ಣೆ ಯೆನ್ನುತ್ತಾರೆ. ಇಂದ್ರಿಯತೃಷ್ಣೆ ಮನುಷ್ಯನನ್ನು ವಿಚಾರಶೂನ್ಯನನ್ನಾಗಿ ಮಾಡಿ ತನ್ನಲ್ಲಿ ತನಗೆ ನಿಯಂತ್ರಣೆ ಇಲ್ಲದಂತೆ ಮಾಡುತ್ತದೆ. ತೃಷ್ಣೆಗೆ ವಶನಾದ ಮನುಷ್ಯನಿಗೆ  ಹಣವನ್ನು ಸಂಪಾದನೆ ಮಾಡುವುದೇ ಜೀವನದ ಪ್ರಧಾನ ಕರ್ತವ್ಯವಾಗುತ್ತದೆ. ಹಾಗಾಗಿ ತನ್ನನ್ನು ತಾನೆ ಸಂಪಾಧನೆ ಮಾಡಲು ತೊಡಗಿಸಿಕೊಳ್ಲುತ್ತಾನೆ . ಹಣ ಸಂಪಾದನೆ ಮಾಡುವುದೇ ತನ್ನ ಕರ್ತವ್ಯ ಅಂತ ತಿಳಿದ ತಕ್ಷಣವೇ ಪಕ್ಕದಲ್ಲೇ ಒಂದು ನೆರಳು ರೂಪುಗೊಳ್ಳುತ್ತದೆ ಅದನ್ನೆ “ಕಾಮ”ವೆನ್ನುತ್ತಾರೆ. ಕಾಮವೇ ಭೋಗಕ್ಕೆ ಕಾರಣವಾಗುತ್ತದೆ. ಕಾಮವೆಂದರೆ ಎಲ್ಲಸಮದಲ್ಲಿ ಸ್ತ್ರೀ-ಪುರುಷರ ಸಂಭಂದವಾದ ಹ್ಯೇಯವಾದ ಕಾಮವಾಗಿ ಸ್ವೀಕರಿಸಬಾರದು. ಶಾಸ್ತ್ರದ ದೃಷ್ಠಿಯಲ್ಲಿ ಕಾಮನೆ ಎಂದರೆ ಬಯಕೆ. ಯಾವ ಮನುಷ್ಯ ಕಡುಬಯಕೆಯನ್ನು ಹೊಂದಿ ದ್ರವ್ಯಾರ್ಜನೆಗಾಗಿ ಓಡಲಾರಂಬಿಸುತ್ತಾನೋ ಅವನು ಆ ಕಡುಬಯಕೆಗೆ ಹುಲ್ಲುಕಡ್ಡಿಗಿಂತಲು ಹೀನವಾಗುತ್ತಾನೆ. ಕಡುಬಯಕೆಯು ಮನುಷ್ಯನನ್ನು ತನ್ನ ಸುತ್ತಲು ಸುತ್ತುವಂತೆ ಮಾಡುತ್ತದೆ. ಮನುಷ್ಯನಿಗೆ ಆಲೋಚನೆಮಾಡಿಕೊಳ್ಳುವ ಅವಕಾಶವನ್ನೂ ಕೊಡುವುದಿಲ್ಲ. ಕಡುಬಯಕೆಗೆ ಒಳಗಾದ ಮನುಷ್ಯನಿಗೆ ಬುದ್ಧಿಯನ್ನು ಉಪಯೋಗಿಸುವ ಲಕ್ಷಣವೇ ಇರುವುದಿಲ್ಲ. ಯುಕ್ತಾಯುಕ್ತ ವಿಚಕ್ಷಣೆ, ವಿವೇಕಪ್ರಜ್ಞೆ ಇರುವುದಿಲ್ಲ. ಸಂಪಾದನೆಗಾಗಿ ಪ್ರತಿದಿನ ಓಡುತ್ತಿರುತ್ತಾನೆ, ಹಣವನ್ನು ತರುತ್ತಿರುತ್ತಾನೆ. ಕಡುಬಯಕೆಗೆ ಒಳಗಾದ ಮನುಷ್ಯನಿಗೆ “ತಾನು ಹೇಗೆ ಸಂಪಾಧನೆ ಮಾಡುತ್ತಿದ್ದೇನೆ” ಯೆನ್ನುವ ಪ್ರಜ್ಞೆಯಿರುವುದಿಲ್ಲ. ತಾನು ಎಷ್ಟು ಸಂಪಾದನೆ ಮಾಡುತ್ತಿದ್ದೇನೆ ಎನ್ನುವುದರಬಗ್ಗೆ ಮಾತ್ರ ಆಲೋಚನೆ ಮಾಡುತ್ತಾನೆ.

     ಒಂದುವೇಳೆ ಮನುಷ್ಯ ತಾನು ಹೇಗೆ ಸಂಪಾದನೆ ಮಾಡುತಿದ್ದೇನೆ ಯೆನ್ನುವ ವಿಷಯವನ್ನು ಆಲೋಚನೆಮಾಡಿದರೆ ಧರ್ಮದ ಕಡೆಗೆ ಮರಳೀದ್ದಾನೆ ಯೆಂತು ಗುರುತು. “ಎಷ್ಟು ಸಂಪಾಧನೆ ಮಾಡುತ್ತಿದ್ದೇನೆ” ಯೆನ್ನುವುದರಬಗ್ಗೆ ಮಾತ್ರ ಆಲೋಚನೆಮಾಡಿತ್ತಿದ್ದಾನೆ ಯೆಂದರೆ ಧರ್ಮಜೊತೆ ಸಂಭಂದ ಬಿಟ್ಟುಹೋಗಿದೆ ಅಂತ ಗುರ್ತಿಸಬೇಕು. ಮನುಷ್ಯ ಒಂದುಸಲ ಧರ್ಮದಜೊತೆ ಸಂಭದವು ಬಿಟ್ಟುಹೋಗಿ ತೃಷ್ಣೇಗೆ(ಕಡುಬಯಕಿಗೆ) ವಶನಾದರೆ ಉತ್ತರಕ್ಷಣ ಪಕ್ಕದಲ್ಲಿ ಬೆಳೆಯುವುದು ಕಾಮನೆ(Desires). ಹಣಸಂಪಾದನೆ ಮಾಡುವುದೇ ಪ್ರಧಾನ ಕರ್ತವ್ಯ ಅಂತ ತಿಳಿದವನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಸಂಪಾದನೆಗಾಗಿ  ಹಾರಾಡುತ್ತಾ ಹಣವನ್ನು ತಂದು ರಾಶಿರಾಶಿಯಾಗಿ ಹಾಕಿ ಕೂಡಿಡುವುದು ಅವ್ಯಾಸವಾಗುತ್ತದೆ.  ಒಂದುಸಲ ಇಂತಹ ಅವ್ಯಾಸ ಬೆಳದರೇ ದೊಡ್ಡದೊಡ್ಡ ಅನರ್ಥಗಳಿಗೂ ಕಾರಣವಾಗುತ್ತದೆ. ಅದು ಎಷ್ಟುದೂರ ಹೋಗುತ್ತದೆ ಯೆಂದರೆ ದೊಡ್ಡ ದೊಡ್ಡ ಭವನಗಳಿಂದ ಹಿಡದು ಸಮಸ್ತ ಭೋಗಗಳು ತನ್ನ ಸ್ವಂತ ಆಗಬೇಕೆನ್ನುವ ತಾಪತ್ರಯ ಪ್ರಾರಂಭವಾಗುತ್ತದೆ. ಈ ತಾಪತ್ರಯದಲ್ಲಿ ಏಷ್ಟೇ ದೊಡ್ಡ ಹಿರಿಮೆಯುಳ್ಳದ್ದಾದರೂ ತನ್ನವಶವಾಗಬೇಕೆನ್ನುವ ಬಯಕೆ ಪ್ರಾರಂಭವಾಗುತ್ತದೆ. ಕೊನೆಗೆ ಒಂದು ಟಿಕೆಟ್ಟು ಖರೀದಿಸಿ ವಿಮಾನವು ಹತ್ತುವುದು ಮಾತ್ರವಲ್ಲ ತನ್ನದೇ ಆದ ವಿಮಾನ, ವಿಮಾನ ನಿಲ್ದಾಣಸ್ಥಳ ಇರಬೇಕೆನ್ನುವಷ್ಟು ಮಟ್ಟಕ್ಕೆ ಬಯಸುತ್ತಾನೆ. ಹಾಗಾಗಿ ಕಾಮನೆಗೆ ಕೊನೆ ಇಲ್ಲ ಅಂತ ಗ್ರಹಿಸಬೇಕು.
ಇಂತಹ ಸ್ಥಿತಿಯನ್ನು ಶಾಸ್ತ್ರ ಈ ರೀತಿ ವರ್ಣನೆ ಮಾಡುತ್ತದೆ. “ಅಗ್ನಿಹೋತ್ರದಲ್ಲಿ ತುಪ್ಪಹಾಕಿ ಅಗ್ನಿಯನ್ನು ಶಾಂತಗೊಳಿಸಲು ಮಾಡುವ ಪ್ರಯತ್ನ”. ಒಂದು ಕಡೆ ಬೆಂಕೆ ಹತ್ತಿದೆ, ಆ ಬೆಂಕಿಯನ್ನು ಆರಿಸಲು ತಂದೆ ನೀರಿಗಾಗಿ ಹುಡುಕುತಿರುತ್ತಾನೆ. ಆ ಮನೆಯ ಒಂದು ಕೋಣೆಯಲ್ಲಿ ಯಾಗ ಮಾಡುವುದಕ್ಕಾಗಿ ಇಟ್ಟಿದಂತ ತುಪ್ಪದ ಪಾತ್ರೆಯಿದೆ. ಬೆಂಕಿಯ ಬಿಸಿಗೆ ತುಪ್ಪವೆಲ್ಲ ಕರಿಗಿಹೋಗಿದೆ. ನೀರಿನಂತಿರುವ ತುಪ್ಪವನ್ನು ನೋಡಿ ತನ್ನ ಮಗ “ಇದು ನೀರಿನಂತಿದೆ ಇದೆ. ಇದನ್ನು ಎಸೆದರೆ ಬೆಂಕಿ ಶಾಂತಗೊಳೆಯುತ್ತದೆ” ಅಂತ ಆಲೋಚನೆ ಮಾಡಿ ಬೆಂಕಿಯಮೇಲೆ ತುಪ್ಪವನ್ನು ಎಸಯುತ್ತಾನೆ ಮಗ. ತುಪ್ಪ ಎಸೆಯುವುದರಿಂದ ಅಗ್ನಿಹೋತ್ರವು ಶಾಂತಿಸುತ್ತದೆಯೇ? ಬದಲಿಗೆ ಹೆಚ್ಚಾಗಿ ಉರಿಯಲಾರಂಬಿಸುತ್ತದೆ. ಇದೇರೀತಿ ಮನುಷ್ಯ “ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳುವುದರಿಂದ ತೃಪ್ತಿ ಸಿಗುತ್ತದೆ” ಯೆನ್ನುವುದು “ತುಪ್ಪವನ್ನು ಹಾಕಿ ಅಗ್ನಿಹೋತ್ರವನ್ನು ಆರಿಸುವ ಪ್ರಯತ್ನ ಮಾಡಿದಂತೆ” ಆಗುತ್ತದೆ.
          
     ಬಯಕೆಗಳನ್ನು ಈಡೇರಿಸಿಕೊಳ್ಳುವುದರಿಂದ ಯಾವಕಾಲಕ್ಕೂ ತೃಪ್ತಿಯು ಸಿಗುವುದಿಲ್ಲ. ಏಕೆಂದರೆ ಮನಸ್ಸಿಗೆ ಒಂದು ದೊಡ್ಡ ದೌರ್ಭಲ್ಯವಿರುತ್ತದೆ. ಭೋಗಾನುಭವದಲ್ಲಿ ಮನಸ್ಸು ಯುಕ್ತಾಯುಕ್ತ ವಿಚಕ್ಷಣೆ ಮತ್ತು ವಿವೇಕದಿಂದ ಇರುವುದಿಲ್ಲ. ವಿವೇಕಪ್ರಜ್ಞೆ ಇಲ್ಲದವನಿಗೆ ಧರ್ಮಾಧರ್ಮಗಳ ಯೆಚ್ಚರವಿರುವುದಿಲ್ಲ. ಒಂದುಸಲ ಕಡುಬಯಕಿಗೆ ವಶನಾಗಿ ಧರ್ಮ-ಅಧರ್ಮ ಎನ್ನುವ ಮಾತನ್ನು ತೊರೆದವನಿಗೆ ಇದು ಪಾಪ-ಇದು ಪುಣ್ಯ ಯೆನ್ನುವ ಆಲೋಚನೆ ಮಾಡುವ ಅವಕಾಶವೂ ಇರುವುದಿಲ್ಲ. ಇಲ್ಲಿ ಪಾಪವೆಂದರೇ “ಭಗವಂತ ಹೀಗೆ ಮಾಡಬೇಡ ಅಂತ ಯಾವುದು ಹೇಳಿದ್ದಾನೋ (ನಿಷೀದ್ದಕರ್ಮ) ಅದು ಮಾಡುವುದು”. ಭಗವಂತ ಹೇಗೆ ಜೀವನಮಾಡಬೇಕು ಅಂತ ಹೇಳಿದ್ದಾನೋ ಅಂತಹ ವಿಹಿತಕರ್ಮವನ್ನು ಮಾಡುವುದರನ್ನು  ಪುಣ್ಯವೆನ್ನುತ್ತಾರೆ. ಒಂದು ಉದಾಹರಣೆ ನೋಡೋಣ.
ಒಬ್ಬ ತಂದೆ ತನ್ನ ಮಗನಿಗೆ ಸ್ವಲ್ಫ ಹಣವನ್ನು ಕೊಟ್ಟು ಅದನ್ನು ಸಂಕಟಸ್ಥಿತಿಯಲ್ಲಿ ಮಾತ್ರ ಬಳಿಸಬೇಕು ಅಂತ ಹೇಳುತ್ತಾನೆ. ತಂದೆ ಮಗನಿಗೆ ಹತ್ತುರೂಪಾಯಿ ಕೊಡುವ ಉದ್ದೇಶ ಏನಂದರೇ ಮಗ ತಾನು ಶಾಲೆಗೆ ಹೋಗುವಾಗ ಅತವಾ ಬರುವಾಗ ಯಾವುದೇ ತೊಂದರೆ ಬಂದರೆ ಅದರಿಂದ ಹೊರಗೆಬರುವುದಕ್ಕೆ ಸಾಧನವಾಗಿ ಕೊಟ್ಟಿದ್ದಾನೆ. ಒಂದು ದಿನ ಶಾಲೆಯಲ್ಲಿ ಪುಸ್ತಕಗಳ ಮಾರಾಟ ನಡೆದಾಗ ಹತ್ತುರೂಪಾಯಿ ಯನ್ನು ವೆಚ್ಚಮಾಡಿ ಉತ್ತಮವಾದ ಪುಸ್ತಕವನ್ನು ಖರೀದಿ ಮಾಡಿದರೂ ತಂದೆ ಮಗನನ್ನು ಬಯ್ಯುವುದಿಲ್ಲ. ಯೇಕೆಂದರೆ ತನ್ನಮಗ ವೊಳ್ಳೆಯ ಪ್ರಯೋಜನೆಗಾಗಿ ಖರ್ಚುಮಾಡಿದನೆಂದು ಅಭಿನಂದಿಸುತ್ತಾನೆ. ತಂದೆ ಮಗನ ಪ್ರಯೋಜನಕ್ಕಾಗಿ, ಸಂಕಷ್ಟದಿಂದ ಹೊರಬರುವುದಕ್ಕಾಗಿ ಹಣವನ್ನು ಕೊಟ್ಟಂತೆಯೇ ಭಗವಂತನೂ ಮನುಷ್ಯನಿಗೆ ಬುದ್ಧಿಯನ್ನು ಕೊಟ್ಟಿದ್ದಾನೆ. ಈ ಬುದ್ಧಿಯನ್ನುಪಯೋಗಮಾಡಿ ಭಗವಂತ ಹೇಗೆ ಭೋಗವನ್ನು ಅನುಭವಿಸಬೇಕು ಅಂತ ಹೇಳಿದ್ದಾನೊ ಅದೇರೀತಿಯಲ್ಲಿ ಮನುಷ್ಯನು ಭೋಗವನ್ನು ಅನುಭವಿಸಬೇಕು. ಭಗವಂತ ತಿಳಿಸಿದ ರೀತಿಯಲ್ಲಿ ಭೋಗವನ್ನು ಅನುಭವಿಸಿದ ಮನುಷ್ಯ ಧರ್ಮಕ್ಕೆ ಹತ್ತರಾಗುತ್ತಾನೆ.

     ಈ ಸಮಸ್ಥ ಪ್ರಪಂಚದಲ್ಲಿ ಭೋಗಸ್ಥಾನಗಳನ್ನು ಸೃಷ್ಠಿಸಿದವನು ಭಗವಂತನೊಬ್ಬನೆ. ಯಾರಿಗೂ ಅದರಮೇಲೆ ಅಧಿಕಾರವಿಲ್ಲ. ಉದಾಹರಣೆಗೆ ಒಂದು ಸುಂದರವಾದ ಜಲಪಾತವನ್ನು ಪರ್ವತದಮೇಲಿಂದ ಬೀಳುವಂತೆ ಮಾಡಿದವನು ಯಾರು? ಗುಲಾಭಿ ಹುವ್ವನ್ನು ಸುಂದರವಾಗಿ ರಚನೆಮಾಡಿದವನು ಯಾರು? ಸಾಣೆಕಲ್ಲಿನಮೇಲೆ ಗಂಧದ ಕಟ್ಟಿಗೆಯನ್ನು ಉಜ್ಜಿದಾಗ ಪರಿಮಳವನ್ನು ಕೊಡುವಂತೆ ಮಾಡಿದವನು ಯಾರು? ಹೀಗೆ ನೋಡುತ್ತಾ ಹೋದರೆ ಈ ಭೂಮಿಯಲ್ಲಿ ಎಲ್ಲವನ್ನು ರಚನೆ ಮಾಡಿದವನು ಭಗವಂತನೆ. ಭಗವಂತನೊಬ್ಬನೇ ಈ ಎಲ್ಲ ಭೋಗಸ್ಥಾನಗಳನ್ನು ಸೃಷ್ಟಿಮಾಡಿದ್ದಾನೆ. ಭಗವಂತ ಒಂದು ವೀಣೆಯನ್ನು ಕೊಟ್ಟಿದ್ದಾನೆ, ವೇಣುನಾಧವನ್ನು ಕೊಟ್ಟಿದ್ದಾನೆ, ಸಂಗೀತವನ್ನು ಕೊಟ್ಟಿದ್ದಾನೆ, ಪರ್ವತಗಳನ್ನು ಹುವ್ವಿನತೋಟಗಳನ್ನು ಕೊಟ್ಟಿದ್ದಾನೆ.ಇವೆಲ್ಲವನ್ನೂ ಭಗವಂತ ನಮಗೆ ಕೊಟ್ಟು ಇವುವಳನ್ನು ನೋಡಿದರೂ, ಕೇಳಿದರೂ ನಿಮ್ಮನ್ನು ಪಾತಳಕ್ಕೆ ವೊತ್ತಿಬುಡುತ್ತೇನೆ ಅಂತ ಭಗವಂತ ಅಂದರೇ..! ನಮಗೇನನಿಸುತ್ತದೆ?? ಭಗವಂತ ಪೈಶಾಚಿಕ ಸ್ವಭಾವವುಳ್ಲವನ್ನು ಯೆನ್ನಬೇಕಾಗುತ್ತದೆ. ಆದರೇ ಭಗವಂತ ಹಾಗೆ ಹೇಳಲಿಲ್ಲ.  ಇವೆಲ್ಲವನ್ನೂ ಭಗವಂತ ನಮ್ಮೆಲ್ಲರಿಗಾಗಿಯೇ ಸೃಷ್ಠಿಮಾಡಿದ್ದಾನೆ. ಭೋಗಿಸುವುದಕ್ಕೆ ಬೇಕಾದ ಉಪಕರಣಗಳನ್ನು ಕೂಡಾ ನಮಗೆ ಕೊಟ್ಟಿದ್ದಾನೆ ಭಗವಂತ. ಕಣ್ಣು ಕೊಟ್ಟಿದ್ದಾನೆ, ಕಣ್ಣಿಗೆ ನೋಡುವ ಶಕ್ತಿಯನ್ನೂ ಕೊಟ್ಟಿದ್ದಾನೆ. ಕಣ್ಣುಕೊಟ್ಟು ಕಣ್ಣಿಗೆ ನೋಡುವ ಶಕ್ತಿಯನ್ನು ಕೊಡದಿದ್ದರೇ ಹೇಗಿರುತ್ತದೆ..! ಒಂದು ಸಲಾ ಆಲೋಚನೆಮಾಡಿದರೇ ಈ ಪ್ರಪಂಚದಲ್ಲಿ ಎಷ್ಟೋ ಭೋಗಗಳಿಂದ ನಮಗೆ ಅನುಭವವು ಬಿಟ್ಟುಹೋಗುತ್ತದೆ? ಒಂದು ಪರ್ವತವನ್ನು ನೋಡಲಾರೆವು, ಒಂದು ದ್ವಜಸ್ಥಂಭವನ್ನು ನೋಡಲಾರೆವು, ಮಂದಿರವನ್ನು ನೋಡಲಾರೆವು, ಹುಟ್ಟಿದ ಮಗನನ್ನು ನೋಡಲಾರೆವು, ಭಗವಂತನ ಪ್ರತಿಮೆಯನ್ನು ನೋಡಲಾರೆವು, ಹುವ್ವಿನ ತೋಟವನ್ನು ಮತ್ತು ಯಾವುದನ್ನೂ ನೋಡಲಾರೆವು. ಭಗವಂತ ಕಣ್ಣು ಕೊಟ್ಟಿದ್ದಾನೆ ಕಣ್ಣೀಗೆ ನೋಡುವ ಶಕ್ತಿಯನ್ನೂ ಕೊಟ್ಟಿದ್ದಾನೆ. ಕಿವಿಯನ್ನು ಕೊಟ್ಟು ಕೇಳುವ ಶಕ್ತಿಯನ್ನೂ ಕೊಟ್ಟವನು ಭಗವಂತನೇ. ನಾವು ಮಧುರವಾದ ಸಂಗೀತವನ್ನು ಕೇಳಲು, ಗುರುಹಿರಿಯರ ಮಾತುಗಳು ಕೇಳಲು ಸಾಧನವಾಗಿ ಕಿವಿಯನ್ನು ಕೊಟ್ಟಿದ್ದಾನೆ. ಮಗ ಮುಟ್ಟಿದಾಗ ಸಂತೋಷವನ್ನು ಹೊಂದುವುದಕ್ಕೆ ಚರ್ಮವನ್ನು, ಸ್ಪರ್ಶೇಂದ್ರಿಯ ಶಕ್ತಿಯನ್ನು ಕೊಟ್ಟಿದ್ದಾನೆ. ಮೂಗಿಗೆ ವಾಸನೆ ಕಂಡುಹಿಡಿಯುವ ಶಕ್ತಿಕೊಟ್ಟಿದ್ದಾನೆ.

     ನಮಗೆ ಕಣ್ಣು ಕೊಟ್ತವನು ಭಗವಂತ, ಕಣ್ಣಿಗೆ ನೋಡುವ ಶಕ್ತಿಕೊಟ್ಟವನೂ ಭಗವಂತ, ಅದೇ ರೀತಿ ನೋಡುವುದಕ್ಕೆ ಬೇಕಾದ ವಸ್ತುಗಳನ್ನು ಸೃಷ್ಠಿಮಾಡಿದವನೂ ಭಗವಂತನೇ. ಒಂದುವೇಳೆ ಭಗವಂತ ಕಣ್ಣುಕೊಟ್ಟು, ಕಣ್ಣಿಗೆ ನೋಡುವ ಶಕ್ತಿಕೊಟ್ಟು ಒಂದು ವಸ್ತು ಇಲ್ಲದಂತೆ ಮಾಡಿದರೆ…! ಈ ಪ್ರಪಂಚದಲ್ಲಿ ನೋಡುವುದಕ್ಕೆ ಏನು ಇರುವುದಿಲ್ಲ, ಶೂನ್ಯ. ನೋಡುವುದಕ್ಕೆ ಏನು ಇಲ್ಲ ಅಂದರೆ ಇನ್ನು ಕಣ್ಣೀಗೆ ಅರ್ಥವೇನಿದೆ? ಭಗವಂತ ನಮಗೆ ಕಣ್ಣುಕೊಟ್ಟೀದ್ದಾನೆ, ಕಣ್ಣಿಗೆ ನೋಡುವ ಶಕ್ತಿಕೊಟ್ಟಿದ್ದಾನೆ, ನೋಡುವುದಕ್ಕೆ ವಸ್ತುವನ್ನು ಕೊಟ್ಟಿದ್ದಾನೆ ಆದರೆ ಅದರ ಜೊತೆ ಒಂದು ನಿಯಮವನ್ನು ಇಟ್ಟಿದ್ದಾನೆ. ತಂದೆ ಹಣವನ್ನು ಕೊಟ್ಟು ಯಾವ ಪ್ರಯೋಜನಕ್ಕಾಗಿ ಬಳಿಸಬೇಕು ಅಂತ ನಿಯಮ ಇಟ್ಟಂತೆ ಭಗವಂತ ಈ ಕಣ್ಣಿನಿಂದ ಭೋಗವನ್ನು ಅನುಭವಿಸುವಾಗ ನಾನು ಹೇಳಿದಂತೆ ಅನುಭವಿಸು ಯೆನ್ನುವ ನಿಯಮವಿಟ್ಟೀದ್ದಾನೆ. ಭಗವಂತ(ಧರ್ಮ) ಹೇಳಿದಂತೆ ಯಾರು ಅನುಭವಿಸ್ತುತ್ತಾರೋ  ಅವನು ಪುಣ್ಯಾತ್ಮ. “ನೀನು ಮದುರ ಪದಾರ್ಥ ತಿನ್ನಬಯಸುತ್ತಿಯಾ? ಪಾಯಸವನ್ನು ಮಾಡು ಆದರೆ ಅದನ್ನು ಭಗವಂತನಿಗೆ ಅರ್ಪಣೆಮಾಡಿ ಇನ್ನೊಬ್ಬರಿಗೆ ಕೊಟ್ಟು ನೀನು ತಿನ್ನು”. “ನಿನಗೆ ಹೊಸದಾದ ಬಟ್ಟೆಯನ್ನು ಧರಿಸಬಯಸುತ್ತಿಯೇ? ಸ್ವಲ್ಫ ಅರಿಶಿನ, ಕುಂಕುಮ ಬಟ್ಟೆಗಳಿಗೆ ಇಟ್ಟು ಭಗವಂತನಿಗೆ ನಮಸ್ಕಾರ ಮಾಡಿ ಧರಿಸು”. ಹತ್ತಿ ಬೆಳದರೆ ತಾನೆ ಬಟ್ಟೆ ಬರುತ್ತದೆ. ಹತ್ತಿ ಬೆಳಿಯುವಂತೆ ಮಾಡಿದವನು ಯಾರು? ಭಗವಂತನೆ. ಹಾಗಾಗಿ ಭಗವಂತನಿಗೆ ನಮಸ್ಕರಿಸಿ ಧರಿಸು. ಯಾವುದು ಅನುಭವಿಸಿದರೂ ಭಗವಂತನ ಪ್ರಸಾದದಂತೆ ಅನುಭವಿಸು.

     ಮತ್ತು ಕೆಲವಿನ ವಿಚಾರದಲ್ಲಿ ನೀನು ಇದರ ವಿಷಯಕ್ಕೆ ಹೋಗಬಾರದು, ಇದನ್ನು ಅನುಭವಿಸಬೇಡ ಅಂತ ಕೂಡಾ ಹೇಳಿದ್ದಾನೆ. ಹಾಗಾದರೆ  ಆ ವಸ್ತುವನ್ನು ಪ್ರಪಂಚದಲ್ಲಿ ಸೃಷ್ಠಿಮಾಡಿದ್ದು ಯಾಕೆ? ಯೆನ್ನುವ ಪ್ರಶ್ನೆಯೂ ಬರುತ್ತದೆ.  ಭಗವಂತ(ಧರ್ಮ) ಹೇಳುತ್ತಾನೆ ಅದು ಆ ವಸ್ತು/ವಿಷಯ ನೇರವಾಗಿ ನಿನಗೆ ಕೆಲಸಕ್ಕೆ ಬಾರದೆ ಇರಬಹುದು ಆದರೆ ಸಂಸ್ಕರಿಸುವುದಕ್ಕೆ ಅಥವಾ ಬೇರೊಬ್ಬರಿಗೆ ಉಪಯೋಗವಾಗಬಹುದು. ಉದಾಹರಣೆಗೆ ಒಂದು  ಹಾವು ಇದೆ, ಹಾವಿಗೆ ವಿಷಯಿದೆ. ಭಗವಂತ ಇಂತಹ ಹಾವನ್ನು ಏಕೆ ಸೃಷ್ಠಿಮಾಡಿದ್ದಾನೆ? ಹಾವಿನ ವಿಷವು ನಮಗೆ ಕೆಲಸಕ್ಕೆ ಬಾರದೆ ಇರಬಹುದು ಆದರೆ ಅದು ವೈದ್ಯನಿಗೆ ಔಷದಿಯಾಗಿ ಮಾಡೂವುದಕ್ಕೆ ಉಪಯೋಗವಾಗುತ್ತದೆ. ಹಾವು ಹೊಲದಲ್ಲಿರುವ ಇಲಿಗಳನ್ನು(ಮೂಷೀಕ) ಹಿಡದು ತಿಂದು ಸಸ್ಯಗಳು ನಾಶವಾಗದೆ ರೈತನನ್ನು ರಕ್ಷಣೆಮಾಡುತ್ತದೆ. ಈ ಸಮಸ್ಥವಾದ ಸೃಷ್ಠಿ ಭಗವಂತನಿಂದಲೇ ಮಾಡಲಾಗಿದೆ. ನಮಲ್ಲಿರುವ ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದಿರ್ಯಗಳು ಭಗವಂತನಿಂದಲೇ ಕೊಡಲಾಗಿದೆ. ಪಾಪಪುಣ್ಯದ ತಾರತಮ್ಯ ಯಾವ ಪ್ರಾಣಿಗೂ ಇಲ್ಲ. ಭಗವಂತ ಇಟ್ಟ ತಾರತಮ್ಯವೆಲ್ಲ ಒಂದು ಮನುಷ್ಯನಿಗೆ ಮಾತ್ರ. ಮನುಷ್ಯನೊಬ್ಬನೇ ಯಾವುದು ಭಗವಂತ(ಧರ್ಮ) ಹೇಳಿದ್ದಾನೋ ಅದನ್ನು ಮಾಡಬೇಕು. ಯಾವುದನ್ನು ಭಗವಂತ(ಧರ್ಮ) ಮಾಡಬೇಡ ಅಂತ ಹೇಳಿದ್ದಾನೆ ಅದು ಮಾಡದೇ ಇರಬೇಕು. ಈ ವಿಷಯವನ್ನು ತುಂಬಾ ಜಾಗ್ರತ್ತೆಯಾಗಿ ಗಮನಿಸಬೇಕಾಗುತ್ತದೆ. ತಕ್ಕ ಎಲ್ಲ ಪ್ರಾಣಿಗಳಿಗೆ ಒಂದೇ ಧರ್ಮ ಅದನ್ನೇ “ಪಶುಧರ್ಮ” ಯೆನ್ನುತ್ತಾರೆ. ಅದಕ್ಕೆ ಮನುಷ್ಯನತರ ಯಾವ ಧರ್ಮವೂ ಇಲ್ಲ. ಅದರ ಬುದ್ಧಿಗೆ ಯಾವುದು ಅನಿಸುತ್ತದೋ ಅದು ಮಾಡುತ್ತದೆ. ಆದರೆ ಮನುಷ್ಯನು ಹಾಗೆ ಮಾಡುವಂತಿಲ್ಲ. ಭಗವಂತ ವೇದದ ಮೂಲಕ, ಶಾಸ್ತ್ರದ ಮೂಲಕ ಯಾವುದನ್ನು ಹೇಳಿದ್ದಾನೋ ಹಾಗೆಯೇ ಜೀವನಮಾಡಬೇಕು ಹಾಗೆಯೇ ಅನುಭವಿಸಬೇಕು. ಇದಕ್ಕೆ ಧರ್ಮ ಎಂತ ಹೆಸರು. ಭಗವಂತ(ಧರ್ಮ) ಹೇಳಿದರೀತಿಯಲ್ಲಿ ಜೀವನಮಾಡುವುದನ್ನೇ “ಧಾರ್ಮಿಕ ಜೀವನ” ಅಂತ ಕರೆಯುತ್ತಾರೆ.
ಮುಂದುವರಿಯುತ್ತದೆ…

Click the below link to Read previous Article.

No comments:

Post a Comment

Note: only a member of this blog may post a comment.

“ನನ್ನ ಮಗಳ ಮದುವೆ ಯಾವಾಗ ಆಗುತ್ತದೆ…?”

     ಕಳದ ಶನಿವಾರ ಬೆಂಗಳೂರಿನಿಂದ ಒಬ್ಬ ತಾಯಿ ತನ್ನ ಮಗಳ ಮದುವೆಗಾಗಿ ಜಾತಕವನ್ನು ತೋರಿಸುವುದಕ್ಕೆ ಬಂದಿದ್ದರು. ತಾಯಿ: “ನನ್ನ ಮಗಳು ಭಾರತದಲ್ಲಿ BE...