Thursday 19 September 2019

ಚಂದ್ರಯಾನ – 2

 
   
      ಕಳದ ವಾರ ನನ್ನ ಸ್ನೇಹಿತ ಹೈದರಾಬಾದ್ ನಿಂದ ಬೆಂಗಳೂರಿಗೆ(ನನ್ನ ಮನೆಗೆ) ಬಂದ. ಶಾಸ್ತ್ರದ ವಿಷಯಗಳು, ನಮ್ಮ ಅಧ್ಯಾತ್ಮ ಸಿದ್ದಾಂತಗಳ ಬಗ್ಗೆ ಮಾತನಾಡುತಾ ಜ್ಯೋತಿಷಶಾಸ್ತ್ರದ ವಿಷಯವೂ ಮಾತನಾಡಲಾರಂಭಿಸಿದೆವು. ಮುಹೂರ್ತ ವಿಷಯ ಮಾತನಾಡುವಾಗ ಚಂದ್ರಯಾನ್-2 ವಿಫಲವಾದ ವಿಷಯ ಬಂತು.
ನನ್ನ ಗೆಳೆಯ ಕೇಳಿದ “ಚಂದ್ರಯಾನ್-2 ವಿಫಲವಾಗುವುದಕ್ಕೆ ಶಾಸ್ತ್ರದ ಪರವಾಗಿ ನೀನು ಏನು ಹೇಳುತ್ತಿಯಾ?” ಅಂತ ಕೇಳಿದ.

    “ಅದರಬಗ್ಗೆ ಶಾಸ್ತ್ರದ ಪರವಾಗಿ ನೋಡುವುದೇನಿದೆ. ಜಯ-ಅಪಜಯ ಸಹಜವಲ್ಲವೇ” ಅಂತ ಉತ್ತರಿಸಿದೆ.
ಗೆಳೆಯ: “ಇಸ್ರೋ ಅವರು ಯಾವುದೇ ಉಪಗ್ರಹ ಪ್ರಯೋಗಮಾಡುವುದಕ್ಕೆ ಮುನ್ನ ಜ್ಯೋತಿಷರನ್ನ ಬೇಟಿಯಾಗಿ ಅವರ ಸಲಹೆಗಳನ್ನು ತೆಗದುಕೊಳ್ಳುವುದು ಕೇಳಿದ್ದೀನಿ. ಮತ್ತು ಉಪಗ್ರಹದಲ್ಲಿ ಉಪಯೋಗಿಸುವ ರಹಸ್ಯವಾದ ವಸ್ತು ತಿರುಮಲ ವೆಂಕಪ್ಪನ ಪಾದವನ್ನು ಮುಟ್ಟಿಸುತಾರಂತೆ ಅಲ್ವಾ!. ಮತ್ತೆ ಜ್ಯೋತಿಷದ ಮುಹೂರ್ತದ ಬಲ ಮತ್ತು ವೆಂಕಪ್ಪನ ಅನುಗ್ರಹವೇನಾಯಿತು?”

ನಾನು: “ಜ್ಯೋತಿಷನಾದವನು  ಸಮಸ್ಯೆಬಂದಾಗ ಮಾರ್ಗವನ್ನು ಸೂಚನೆಮಾಡಿ, ಮನುಷ್ಯನಲ್ಲಿ ದೌರ್ಭಲ್ಯ ಉಂಟಾದಾಗ ಧೈರ್ಯವನ್ನು ತುಂಬುವ ಕೆಲಸ ಮಾಡುತ್ತಾನೆ. ಚಂದ್ರಯಾನ್-2 ಈಗಾಗಲೆ ವಿಫಲವಾಗಿ ಆಯಿತು. ಮತ್ತೆ ಅದರಬಗ್ಗೆ ನಾವು ಚಿಂತನೆಮಾಡುವುದೇನಿದೆ”

ಗೆಳೆಯ: “ಹಾಗಾದರೇ ಜ್ಯೋತಿಷಶಾಸ್ತ್ರಪ್ರಕಾರ ವಿಫಲವಾಗುವುದಕ್ಕೆ ಕಾರಣವೇ ಇಲ್ಲವೆಂದು ಹೇಳುತ್ತೀಯಾ?” ಅಂತ ಹೆಚ್ಚಿನ ಉತ್ಸಾಹದಿಂದ ಕೇಳಿದ. ನನ್ನ ಗೆಳೆಯನಿಗೂ ಸಹ ಜ್ಯೋತಿಷಶಾಸ್ತ್ರದಲ್ಲಿ ಪರಿಜ್ಞಾನವಿತ್ತು. ಹಾಗಾಗಿ ಇದರ ಬಗ್ಗೆ ಕಿಂಚಿತ್ ಚಿಂತನೆ ಮಾಡಲು ಉಪಕ್ರಮಿಸಿದೆ.

ಚಂದ್ರಯಾನ್-2 ಶ್ರೀಹರಿಕೋಟ(ಆಂದ್ರಪ್ರದೇಶ) ಸ್ಥಳದಿಂದ ದಿನಾಂಕ 22-07-2019 ರ ಮಧ್ಯಾಹ್ನ 02:43 ನಿಮಿಷಗಳಿಗೆ ಪ್ರಯೋಗಿಸಲಾಗಿದೆ(Launch). Computer ಸಹಾಯದಿಂದ ಚಂದ್ರಯಾನ ಪ್ರಯೋಗಿಸಿದ ಸಮಯಕ್ಕೆ ತಕ್ಕಂತೆ ಗ್ರಹಸ್ಥಿತಿಯನ್ನು ಹಾಕಿಕೊಂಡೆ.



  • ಉಪಗ್ರಹವನ್ನು ಕಳುಹಿಸಿದ ಸಮಯದಲ್ಲಿ ವೃಶ್ಚಿಕಲಗ್ನ ಉದಯವಾಗಿದೆ. ಲಗ್ನಾಧಿಪತಿಯಾದ ಕುಜ ನೀಚಸ್ಥಾನದಲ್ಲಿ ಮತ್ತು ಅಸ್ಥಂಗತನಾಗಿದ್ದಾನೆ.  ಗುರು ಗ್ರಹ ವಕ್ರಗಮನದಲ್ಲಿ ಲಗ್ನದಲ್ಲೇ ಇದ್ದಾನೆ. ಶುಭಗ್ರಹ ಲಗ್ನದಲ್ಲಿರುವುದರಿಂದ ಪ್ರಯೋಗವು ಯಶಸ್ವಿಗೊಂಡಿದೆ. ಆದರೆ ವಕ್ರಗಮನದಲ್ಲಿರುವ ಗ್ರಹ ಪೂರ್ಣ ವಿಜಯವನ್ನು/ಶುಭವನ್ನು ಸೂಚನೆ ಮಾಡಲಾರದು. ಶುಭಗ್ರಹಗಳು ವಕ್ರಿಯಾದಾಗ ಶುಭಫಲವನ್ನು ನೀಡುವುದು ಕಷ್ಟ.
  • ದೂರ ಪ್ರಯಾಣಗಳನ್ನು ನವಮಸ್ಥಾನ ಸೂಚನೆ ಮಾಡುತ್ತದೆ ಅಂತ ನಾವು ವಿದೇಶ ಪ್ರಯಾಣದ ವಿಷಯದಲ್ಲಿ ನೋಡಿದ್ದೇವೆ. ಪ್ರಯೋಗಮಾಡುವ ಸಮಯಕ್ಕೆ ನವಮಸ್ಥಾನದಲ್ಲಿ ಮೂರು ಪಾಪಗ್ರಹಗಳಿವೆ(ಸೂರ್ಯ, ಬುಧ ಮತ್ತು ಕುಜ). ಈ ಗ್ರಹಗಳಲ್ಲಿ ಕುಜ ನೀಚ ಮತ್ತು ಅಸ್ಥಂಗತನಾಗಿದ್ದಾನೆ, ಬುಧ ವಕ್ರಗಮನದಲ್ಲಿ ಅಸ್ಥಂಗತನಾಗಿದ್ದಾನೆ. ಬುಧನು ಅಷ್ಟಮಾಧಿಪತಿ(ನಷ್ಟ- ವಿಯೋಗಾದಿಪತಿ)ಆಗಿದ್ದಾನೆ. ಅಷ್ಟಮಾದಿಪತಿಯ ಸಂಭಂದ ಯೋಗಿಸುವುದಿಲ್ಲ. ಗುರುಗ್ರಹದ ವಕ್ರದೃಷ್ಠಿ(ಪಂಚಮ-ಅಪಸವ್ಯದೃಷ್ಠಿ) ನವಮಸ್ಥಾನದಮೇಲೆ ಇದೆ. ಹಾಗಾಗಿ ಕೊನೆತನಕ ಯಶಸ್ವಿ ಆಗುತ್ತದೆಯೆನ್ನುವ ವಾತಾವರಣ ಉಂಟುಮಾಡಿತು.
  • ಮತ್ತೊಂದು ವಿಚಾರವೇನೆಂದರೇ ನಾವು ಹೊಸ ವಾಹನವನ್ನು ತೊಗೊಂಡಾಗ ಪೂಜೆ ಮಾಡೀಸುತ್ತೀವಿ. ಮುಹೂರ್ತವನ್ನು ಆಯ್ಕೆಮಾಡುವಾಗ ಚರ ಲಗ್ನವು ಶ್ರೇಷ್ಠ ಅಂತ ತಿಳಿದಿದ್ದೀವಿ. ಚರಲಗ್ನದಲ್ಲಿ ವಾಹನ ನಡೀಸಿದರೇ ವಾಹನ ಉಪಯೋಗಕ್ಕೆ ಬರುತ್ತದೆ, ಅದೇ ಸ್ಥಿರ ಲಗ್ನದಲ್ಲಿ ವಾಹನ ನಡಿಸಿದಾಗ ವಾಹನವನ್ನು ಹೆಚ್ಚು ಉಪಯೋಗಿಸದೆ ಮನೆಗೆ ಪರಿಮಿತವಾಗುತ್ತದೆ ಅಂತ ಮುಹೂರ್ತ ಚಿಂತಾಮಣಿ ತಿಳಿಸುತ್ತದೆ. ಈ ಸಾಮಾನ್ಯಧರ್ಮ Rocket Launching ವಿಷಯದಲ್ಲಿ ಏಕೆ ನೋಡಿಲ್ಲ ಅಂತ ನನಗೆ ಅರ್ಥವಾಗಲಿಲ್ಲ. ವೃಶ್ಚಿಕ ಲಗ್ನ ಸ್ಥಿರ ಲಗ್ನ. ಸ್ಥಿರ ಲಗ್ನದಲ್ಲಿ ಚಂದ್ರಯಾನ್-2 ಪ್ರಯೋಗಿಸಲ್ಪಟ್ಟಿದೆ. ಹಾಗಾಗಿ ಅದು ಪ್ರಯೋಜನಕಾರಿಯಾಗದೆ ಚಂದ್ರನಮೇಲೆ ಸುಮ್ಮನೇ ಕುಳಿತುಕೊಂಡಿದೆ ಯೆನ್ನುವ ವಿಷಯ ಗಮನಕ್ಕೆ ಬಂದಿದೆ.
  • ಮುಖ್ಯವಾದ ವಿಚಾರ ಮತ್ತೊಂದು ಏನಂದರೇ ಉಪಗ್ರಹವನ್ನು ಪ್ರಯೋಗಿಸಲಿರುವ ನಮ್ಮ ವಿಜ್ಞಾನಿಗಳಿಗೆ ಚಂದ್ರನಮೇಲೆ ಯಾವಾಗ ಅದು ಇಳಿಯುತ್ತದೆ ಯೆನ್ನುವ ವಿಚಾರ ಕೂಡಾ ಖಚಿತವಾಗಿ ಗೊತ್ತಿದೆ. ಹಾಗಾಗಿಯೇ ನಮ್ಮ ಪ್ರಧಾನಮಂತ್ರಿಗಳ ಜೊತೆ ವೀಕ್ಷಿಸಲು ಬಹಳಷ್ಟು ವಿದ್ಯಾರ್ಥಿಗಳಿಗೆ ಅವಕಾಶನೀಡಿದ್ದರು. ವಿಜ್ಞಾನಿಗಳು ತಿಳಿಸಿದ ಸಮಯ 07-Sep-2019 ಅರ್ದರಾತ್ರಿ 01:30 AM ರಿಂದ  02:30 AM ಸಮಯದಲ್ಲಿ ಚಂದ್ರನಮೇಲೆ ಇಳಿಯುತ್ತದೆ ಅಂತ.  ಚಂದ್ರನ ಮೇಲೆ ಇಳಿಯುವ ಸಮಯದ ಆಧಾರವಾಗಿ ನಾನು ಗ್ರಹಸ್ಥಿತಿ ಹಾಕಿಕೊಂಡೆ.



  • ಮಿಥುನ ಲಗ್ನ, ಲಗ್ನದಲ್ಲಿ ಪಾಪಗ್ರಹ ರಾಹು ಇದಾನೆ. ಶನಿ ಮತ್ತು ಕೇತುವಿನ ವಕ್ರದೃಷ್ಠಿ ಲಗ್ನದಮೇಲೆ ಇದೆ. ಯಶಸ್ವಿಯನ್ನು ಸೂಚಿಸುವ ದಶಮಾಧಿಪತಿ ಗುರು ಚಂದ್ರನ ಜೊತೆ  ದುಷ್ಟಸ್ಥಾನದಲ್ಲಿದ್ದಾನೆ(ಷಷ್ಟ).
  • ಚಂದ್ರಯಾನ್-2 ಚಂದ್ರನಮೇಲೆ ಇಳಿಯುವ ಸಮಯಕ್ಕೆ (07-09-2019 01:30 AM to 02:30 AM)ಸರಿಯಾಗಿ ಶನಿ-ಬುಧ-ಬುಧ-ಚಂ-ಬುಧ ದಶೆಯು ನಡೆಯುತ್ತಿದೆ. ಶನಿಗ್ರಹ ಸಹಜ ವಿಯೋಗ(ನಷ್ಟ) ಕಾರಕ ಮತ್ತು ಬುಧ ಗ್ರಹ ವಿಯೋಗಾಧಿಪತಿ(ಅಷ್ಟಮಾಧಿಪತಿ). ಉಪಗ್ರಹ ಇಳಿಯುವ ಸಮಯದಲ್ಲಿ ನಷ್ಟವನ್ನು, ವಿಯೋಗವನ್ನು ಸೂಚಿಸುವ ಗ್ರಹಗಳ ಪ್ರಾಭಲ್ಯ ಬಹಳ ಇರುವುದರಿಂದ ಭೂಮಿಗೆ ಚಂದ್ರಯಾನ್-2 ರಿಂದ ವಿಯೋಗವಾಗಿದೆ ಅಂತ ತಿಳಿಯಬಹುದು. ಈ ವಿಷಯವು ಜ್ಯೋತಿಷಶಾಸ್ತ್ರ ಅಧ್ಯಯನ ಮಾಡುವ ಸಾಮಾನ್ಯ ವಿಧ್ಯಾರ್ಥಿಗೂ ಸಹ ಹೊಳೆಯುತ್ತದೆ. ಜಾತಕಪ್ರಕಾರ ವಿದ್ಯೆ, ವಿವಾಹ, ಉದ್ಯೋಗ ಮೊದಲಾದ ಯಾವ ವಿಷಯಗಳಿಗಾದರು ಅಷ್ಟಮ ಸಂಭಂದ ಮತ್ತು ಶನಿಯ ಸಂಭಂದ ಬಂದಾಗ ತೊಂದೆರೆಗೊಳಗಾಗುವ ಅವಕಾಶವಿದೆ ಅಂತ ತಿಳಿದಿದ್ದೀವಿ. ಚಂದ್ರಯಾನು-2 ಕೂಡಾ ಇದೇ ಸೂತ್ರಕ್ಕೆ ವೊಳಗಾಗುತ್ತದೆ ಅಂತ ತಿಳಿತಕ್ಕದ್ದು ಅಂತ ನನ್ನ ಅಭಿಪ್ರಾಯ.
  • ಲಗ್ನದಿಂದ ತೃತೀಯ ಸ್ಥಾನ Communication ಸೂಚಿಸುತ್ತದೆ, ಬುಧನು ಸಹ Communication ಸೂಚನೆಮಾಡುತ್ತಾನೆ. ತೃತೀಯ ಸ್ಥಾನದಲ್ಲಿ ಬುಧ, ಕುಜ ಮತ್ತು ಶುಕ್ರ ಮೂರುಗ್ರಹಗಳು ಅಸ್ಥಂಗತರಾಗಿದ್ದಾರೆ. ಹಾಗಾಗಿ ಚಂದ್ರಯಾನ್-2 ರಿಂದ ಸಂದೇಶ ಪಡೆಯುವ್ದರಲ್ಲಿ ವಿಫಲವಾಗಿದೆ.  ಆದರೇ ಶುಭಗ್ರಹಗಳೂ(ಶು, ಬು) ಸಹಾ ತೃತೀಯ ಸ್ಥಾನದಲ್ಲಿರುವುದು ಮತ್ತು ತೃತೀಯಾಧಿಪತಿ ಬಲಿಷ್ಟನಾಗಿರುವುದರಿಂದ ಚಂದ್ರಯಾನ್-2 ರಿಂದ ಮುಂದೆ ಸಂದೇಶ ಬರುವುದಕ್ಕೂ ಅವಕಾಶವಿದೆ ಅಂತ ತಿಳಿಬಹುದು.
     "ನನಗೆ ಸಂಶಯ ಬಂದಿರುವ ವಿಷಯವೇನೆಂದರೆ ಮೇಲೆ ಚಿಂತನೆ ಮಾಡಿದ ಸಾಮಾನ್ಯ ವಿಚಾರ ಉಪಗ್ರಹಗಳ ಪ್ರಯೋಗಕ್ಕೆ ಮುಹೂರ್ತವಿಡುವ ದೊಡ್ದ ಪಂಡಿತರಿಗೆ ಯೇಕೆ ಗೊತ್ತಾಗಿಲ್ಲ ಅಂತ. ಗೃಹಪ್ರವೇಶ/ವಿವಾಹ ಮೂಹೂರ್ತವನ್ನು ಗಣನೆ ಮಾಡುವಾಗ ಲಗ್ನಾಧಿಪತಿ ಬಲಹೀನವಾಗಿದ್ದರೂ ಅಥವ ದುಷ್ಟಸ್ಥಾನದಲ್ಲಿದ್ದರೂ(6,8,12) ಶುಭ ಆಗುವುದಿಲ್ಲ ಅಂತ ತಿಳಿದು ದೋಷರಹಿತವಾದ ಮುಹೂರ್ತವನ್ನು ಹುಡುಕುತ್ತೀವಿ. ಆದರೇ ಅತ್ಯಂತ ಪ್ರಾಮುಖ್ಯವಾದ, ಹಿರಿಯದಾದ ಉಪಗ್ರಹದ ಪ್ರಯೋಗಕ್ಕೆ ಈ ತಿಳುವಳಿಕೆ ಏನಾಯಿತೋ ನನಗೆ ಅರ್ಥವಾಗಲಿಲ್ಲ.

     ಉಪಗ್ರಹದ ಪ್ರಯೋಗಕ್ಕೆ (Rocket Launching) ಸಹಾ ಮುಹೂರ್ತವನ್ನು ಬಯಸುತ್ತಾರಾ ವಿಜ್ಞಾನಿಗಳು ಅಂತ ಬಹಳ ಜನರಿಗೆ ಸಂಶಯಬರಬಹುದು. ಆದರೆ ಇದು ನಡೆಯುತ್ತದೆ ಆದರೆ ಯಾರು ಈ ಮುಹೂರ್ತವಿಡುತ್ತಾರೊ ತಿಳಿಸುವುದಿಲ್ಲ ಅಷ್ಟೇ.

     ಇದು ನನ್ನ ವ್ಯಕ್ತಿಗತವಾದ ಅಭಿಪ್ರಾಯ ಮತ್ತು ಈ ಪೋಸ್ಟ್ ಕೇವಲ ಜ್ಯೋತಿಷಶಾಸ್ತ್ರದ ದೃಷ್ಟಿಯಲ್ಲಿ ಮಾತ್ರ ನೋಡಲಾಗಿದೆ/ಹಾಕಲಾಗಿದೆ. ಯಾರನ್ನೂ ನೋವಿಸುವ ಪ್ರಯತ್ನವಲ್ಲ ಅಂತ ಗ್ರಹಿಸಬೇಕು.  ಚಂದ್ರಯಾನ -2 ಪ್ರಯೋಗದಲ್ಲಿ ಫಾಲ್ಗೊಂಡ ಎಲ್ಲ ವಿಜ್ಞಾನಿಗಳಿಗೂ ಮನಃಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತಿದ್ದೇನೆ. ಧನ್ಯವಾದಗಳು


ಶ್ರೀಕೃಷ್ಣಾರ್ಪಣಮಸ್ತು

No comments:

Post a Comment

Note: only a member of this blog may post a comment.

“ನನ್ನ ಮಗಳ ಮದುವೆ ಯಾವಾಗ ಆಗುತ್ತದೆ…?”

     ಕಳದ ಶನಿವಾರ ಬೆಂಗಳೂರಿನಿಂದ ಒಬ್ಬ ತಾಯಿ ತನ್ನ ಮಗಳ ಮದುವೆಗಾಗಿ ಜಾತಕವನ್ನು ತೋರಿಸುವುದಕ್ಕೆ ಬಂದಿದ್ದರು. ತಾಯಿ: “ನನ್ನ ಮಗಳು ಭಾರತದಲ್ಲಿ BE...